ಡಿವಿಜಿಸುದ್ದಿ.ಕಾಂ ದಾವಣಗೆರೆ: ವೃತ್ತಿ ಜೀವನದಲ್ಲಿ ನೀವು ಮಾಡಿರುವ ಒಳ್ಳೆ ಕೆಲಸಗಳು ನಿಮ್ಮ ಗೌರವನ್ನು ಹೆಚ್ಚಿಸುತ್ತವೆ. ನೀವು, ನಿಮ್ಮ ಕೆಲಸದಲ್ಲಿ ತೋರಿಸುವ ಆಸಕ್ತಿ, ಪ್ರಾಮಾಣಿಕತೆ, ಬದ್ಧತೆಯಿಂದ ನಿಮ್ಮ ಗೌರ ಸಿಗುತ್ತದೆಯೋ ಹೊರತು, ವಯಸ್ಸಿನಿಂದಲ್ಲ ಎಂದು ತರಳಬಾಳು ಶಾಖಾ ಮಠದ ಸಾಣೇಹಳ್ಳಿಯ ಶ್ರೀಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾ ವಿದ್ಯಾಲಯ, ಅನುಭವ ಮಂಟಪ ಹಾಗೂ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಅತ್ಯುತ್ತಮ ಶಿಕ್ಷಕರಿಗೆ ಅಭಿನಂದನಾ ಸಮಾರಂಭ ಸಾನಿಧ್ಯ ವಹಿಸಿ ಮಾತನಾಡಿದರು.
ನಿವೃತ್ತಿ ಎಂಬುದು ವಯಸ್ಸಿ ಮಾತ್ರ, ನಿಮ್ಮ ಕೆಲಸಗಳಿಗಲ್ಲ. ವೃತ್ತಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದವರು ನಿವೃತ್ತಿ ನಂತರವೂ ಸಮಾಜಕ್ಕೆ ಏನಾನ್ನಾದರೂ ಕೊಡುಗೆ ನೀಡುವ ಉತ್ಸಾಹದಲ್ಲಿತ್ತಾರೆ. ಆದರೆ, ವೃತ್ತಿಯಲ್ಲಿ ನಿರ್ಲಕ್ಷೆ ತೋರಿದವರು ನಿವೃತ್ತಿ ನಂತರವೂ ನೆಮ್ಮದಿ ಕಾಣುವುದಿಲ್ಲ. ಹೀಗಾಗಿ ಸದಾ ಕ್ರಿಯಾಶೀಲರಾಗಿ ಇರುವವರು ಜೀವನದಲ್ಲಿ ನೆಮ್ಮದಿಯಾಗಿ ಇರುತ್ತಾರೆ ಎಂದರು.

ಪ್ರತಿಯೊಬ್ಬರು ಅಂತರ್ಮುಖಿಯಾಗಿ ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳಬೇಕು. ಆಗ ತನ್ನ ಒಳಗಿನ ತಪ್ಪುಗಳು ಅರಿವಾಗುತ್ತದೆ. ೧೨ ನೇ ಶತಮಾನದ ಬಸವಣ್ಣ ಸೇರಿದಂತೆ ಎಲ್ಲ ವಚನಕಾರರು ಇದನ್ನೇ ಹೇಳಿರುವುದು. ಪ್ರತಿಯೊಬ್ಬರು ವಚನ ಸಾರವನ್ನು ಮೈಗೂಡಿಸಿಕೊಂಡಾಗ ಜೀನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ. ಶಿಕ್ಷಕರು ಭೌಧಿಕ ಮಟ್ಟದ ಜೊತೆಗೆ ನೈತಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಅತ್ಯುತ್ತಮ ಶಿಕ್ಷಕರಾದ ರತ್ನ ಎಂ, ಕೆ.ಆರ್. ಬಸಪ್ಪ, ಗುರುಸಿದ್ಧಸ್ವಾಮಿ, ಶರಣಪ್ಪ, ರತ್ನಮ್ಮ ಸಾಲಿಮಠ್, ಜಗದೀಶ್ ಬಳೆಗಾರ್ ಅವರಿಗೆ ಸನ್ಮಾನಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಂಜುನಾಥ್ ಕುರ್ಕಿ, ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾಯದರ್ಶಿ ಶಿವನಕೆರೆ ಬಸವಲಿಂಗಪ್ಪ, ಎಂ.ಎಂ. ಶಿಕ್ಷಣ ಮಹಾ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ. ಎಚ್.ವಿ. ವಾಮದೇವಪ್ಪ ಉಪಸ್ಥಿತರಿದ್ದರು.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 9844460336, 7483892205



