ಡಿವಿಜಿ ಸುದ್ದಿ, ಯಾದಗಿರಿ: ಕೊರೊನಾ ವೈರಸ್ ಮಾತ್ರೆಗಳೆಂದು ನಕಲಿ ಮಾತ್ರೆ ಹಂಚಿಕೆ ಮಾಡಿದ ಆರೋಪದ ಮೇಲೆ ನಕಲಿ ವೈದ್ಯ ಮತ್ತು ಮಾತ್ರೆ ಹಂಚಲು ಸಹಕರಿಸಿದ ಜಿಲ್ಲಾ ಪಚಾಯತ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಬಸವರೆಡ್ಡಿ ಅನ್ನಪೂರ್ ಮೇಲೆ ಮೇಲೆ ಎಫ್‍ಐಆರ್ ದಾಖಲಾಗಿದೆ.
ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಗುಂಜುನುರೂನಲ್ಲಿ ಶರಣಗೌಡ ಮಾಲಿಪಾಟೀಲ್ ಎಂಬ ವ್ಯಕ್ತಿ ತಾನು ಸರ್ಕಾರಿ ವೈದ್ಯನೆಂದು ಮತ್ತು ಸರ್ಕಾರ ಈ ಮಾತ್ರೆ ಕೊಡಲು ಹೇಳಿದೆ ಎಂದು ಕೊರೊನಾ ವೈರಸ್ ನಕಲಿ ಮಾತ್ರೆ ಹಂಚಿದ್ದಾನೆ. ಈತನಿಗೆ ಜಿ.ಪಂ ಮಾಜಿ ಅಧ್ಯಕ್ಷನ ಮತ್ತು ಕಾಂಗ್ರೆಸ್ ಮುಖಂಡ ಬಸವರೆಡ್ಡಿ ಅನ್ನಪೂರ್ ಸಾಥ್ ನೀಡಿದ ಆರೋಪ ಎದುರಿಸುತ್ತಿದ್ದಾರೆ.

ಬಸವರೆಡ್ಡಿ ಅನ್ನಪೂರ್ ತನ್ನ ಪೋಟೋ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಪೋಟೋ ಇರುವ ಪ್ಯಾಕ್‍ನಲ್ಲಿ ಹೋಮಿಯೋಪತಿ ಮಾತ್ರೆಯಿಟ್ಟು ಜನರಿಗೆ ಉಚಿತವಾಗಿ ಹಂಚಿಕೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಆದರೆ, ಈ ರೀತಿ ಮಾತ್ರೆ ವಿತರಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿಲ್ಲ. ಹೀಗಾಗಿ ಇದು ಕಾನೂನು ಬಾಹಿರವಾಗಿದ್ದು, ಈ ಇಬ್ಬರ ಮೇಲೆ ಐಪಿಸಿ ಸೆಕ್ಷನ್ 276, 336(ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯನ್ನುಂಟು ಮಾಡುವ ಕೃತ್ಯದಲ್ಲಿ ಪಾಲ್ಗೊಳ್ಳುವುದು), 419(ಅನುಕರಣೆ ಮೂಲಕ ವಂಚನೆಗಾಗಿ ಶಿಕ್ಷೆ) ಮತ್ತು ಕಲಂ-42 ದಿ ಫಾರ್ಮಸಿ ಆ್ಯಕ್ಟ್ ಮೇಲೆ ಗುರುಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ



