ಡಿವಿಜಿ ಸುದ್ದಿ, ಶಿರಸಿ: ರಾಜ್ಯ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಮಾರಿಕಾಂಬಾ ದೇವಸ್ಥಾನ ಇಂದಿನಿಂದ ಓಪನ್ ಆಗಿದೆ.
ಇಂದು ಬೆಳಿಗ್ಗೆಯಿಂದಲ್ಲೇ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕೊರೊನಾ 0ಲಾಕ್ ಡೌನ ಹಿನ್ನೆಲೆ ಕಳೆದ ಎರಡೂವರೆ ತಿಂಗಳುಗಳಿಂದ ಕ್ಲೋಸ್ ಆಗಿದ್ದ ದೇವಸ್ಥಾನದ ಬಾಗಿಲು ಓಪನ್ ಆಗಿದೆ.
ಬೆಳಗ್ಗೆ 7.30ರಿಂದಲೇ ನೂರಕ್ಕೂ ಹೆಚ್ಚು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಸಾಮಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಮಾರ್ಕಿಂಗ್, ಥರ್ಮಲ್ ಸ್ಕ್ರೀನಿಂಗ್, ಕೈಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಮೂರು ತಿಂಗಳುಗಳ ನಂತರ ಈಗ ಭಕ್ತರಿಗೆ ದೇವಾಲಯದಲ್ಲಿ ದೇವಿಯ ದರ್ಶವನ್ನು ಭಕ್ತರು ಪಡೆದರು.