ನವದೆಹಲಿ: ದೇಶದ ಟೆಲಿಕಾಂ ಕ್ಷೇತ್ರದಲ್ಲಿ ದ್ವೈತ ಕಂಪನಿಗಳಾದ ಭಾರತೀಯ ಮೂಲದ ಐಡಿಯಾ ಮತ್ತು ಇಂಗ್ಲೆಂಡ್ ಮೂಲದ ವೊಡೋಫೋನ್ ದಿವಾಳಿಯಾಗಿದ್ದು, ಕೇಂದ್ರ ಸರ್ಕಾರ ನಮಗೆ ಪರಿಹಾರೋಪಾಯ ಕಲ್ಪಿಸದಿದ್ದಲ್ಲಿ ಮುಚ್ಚುತ್ತೇವೆ ಹೇಳಿವೆ.
ಈ ಹಿಂದೆ ಐಡಿಯಾ ಕಂಪನಿ ಮತ್ತು ವೊಡೋಫೋನ್ ಕಂಪನಿಯಲ್ಲಿ ವಿಲೀನವಾಗಿದ್ದು, ಈ ವಿಲೀನ ಪ್ರಕ್ರಿಯೆಯಿಂದ ದೇಶದಲ್ಲಿ ತನ್ನ ವಿಸ್ತಾರವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು ಎಂಬುದು ವೊಡೋಫೋನ್ ಕಂಪನಿಯ ಲೆಕ್ಕಚಾರವಾಗಿತ್ತು. ಆದರೀಗ, ದೇಶದಲ್ಲಿನ ಟೆಲಿಕಾಂ ಕ್ಷೇತ್ರದ ತೀವ್ರ ಸ್ಪರ್ಧೆಯಿಂದ ಕೆಂಗೆಟ್ಟಿರುವ ಇಡಿಯಾ ಮತ್ತು ವೊಡೋಫೋನ್ ಕೇಂದ್ರ ಸರ್ಕಾರದ ಮೊರೆ ಹೋಗಿವೆ.
ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಅವರು, ಜನವರಿ ಅಂತ್ಯದ ವೇಳೆಗೆ ಕಂಪನಿಯು ಬಾಕಿ ಉಳಿಸಿಕೊಂಡಿರುವ ನಿವ್ವಳ ಆದಾಯ ಹಣವನ್ನು ಪಾವತಿಸಬೇಕಿದ್ದು, ಈ ಕುರಿತು ಕೇಂದ್ರ ಸರ್ಕಾರದ ನಮಗೆ ಏನಾದರೂ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ವೊಡಾಫೋನ್, ಐಡಿಯಾದ ಅಧ್ಯಾಯ ಮುಕ್ತಾಯವಾಗಲಿದೆ. ದಿವಾಳಿಯಾದ ನಂತರವೂ ನಾವು ಹಣ ಹೂಡುವುದರಲ್ಲಿ ಅರ್ಥವಿಲ್ಲ ಹೀಗಾಗಿ ನಾವು ಮಳಿಗೆಗಳನ್ನು ಮುಚ್ಚುತ್ತೇವೆ ಎಂದು ಬಿರ್ಲಾ ಸ್ಪಷ್ಟಪಡಿಸಿದ್ದಾರೆ.
ಮುಖೇಶ್ ಅಂಬಾನಿಯವರ ರಿಲಾಯನ್ಸ್ ಜಿಯೋ ಕಡಿಮೆ ಬೆಲೆಯ ಡೇಟಾ ಹಾಗೂ ಕರೆಯ ಸೌಲಭ್ಯ ನೀಡುವ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿತ್ತು. ಜಿಯೋಗೆ ಸ್ಪರ್ಧೆಯೊಡ್ಡಲು ಇಡಿಯಾ ಮತ್ತು ವೊಡೋಫೋನ್ ಸಹ ದರ ಕಡಿಮೆ ಮಾಡಿದ್ದವು. ಇದರಿಂದ ಭಾರೀ ನಷ್ಟ ಅನುಭವಿಸಿ ದಿವಾಳಿ ಹಂತಕ್ಕೆ ಬಂದು ನಿಂತಿವೆ.



