ಡಿವಿಜಿ ಸುದ್ದಿ, ಹಳೇಬೀಡು: ಐದನೇ ದಿನವಾದ ಇಂದಿನ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಕಾಂಗ್ರೆಸ್ ಪ್ರಭಾವಿ ಮುಖಂಡ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂಧ್ರ ಸ್ವಾಮೀಜಿ, ಸಂತ ಅಂತೋನಿ ದೇವಾಲಯದ ಗುರು ರೊನಾಲ್ಡ್ ಕರ್ಡೋಜಾ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗಣಿ ಭೂ ವಿಜ್ಞಾನ ಮತ್ತು ವಾಣಿಜ್ಯ ಸಚಿವ ಸಿ.ಸಿ. ಪಾಟೀಲ್, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ, ಹಾಸನ ಜಿಲ್ಲಾಧಿಕಾರಿ ಆರ್ . ಗಿರೀಶ್, ನಿವೃತ್ತ ನ್ಯಾಯಮೂರ್ತಿ ಕೆ,ಎಲ್. ಮಂಜುನಾಥ್, ಮಾಜಿ ಸಚಿವ ಎಚ್. ಆಂಜನೇಯ ಭಾಗಿಯಾಗಲಿದ್ದಾರೆ .
ಉಪನ್ಯಾಸ ಕಾರ್ಯಕ್ರಮದಲ್ಲಿ ‘ಭಾರಯತೀಯ ಬಾಹ್ಯಾಕಾಶ ಕಾರ್ಯಕ್ರಮ’ ಕುರಿತು ಇಸ್ರೋ ಮಾಜಿ ಅಧ್ಯಕ್ಷ ಪದ್ಮಶ್ರೀ ಡಾ. ಎ.ಎಸ್. ಕಿರಣ್ ಕುಮಾರ್, ‘ಸುಗಮ ಸಂಗೀತ’ ಕುರಿತು ಸಂಗೀತ ವಿದ್ವಾಂಸ ಶ್ರೀನಿವಾಸ ಉಡುಪ, ‘ಸಂತಸದ ಬದುಕಿಗೆ ಸರಸ’ ಕುರಿತು ಹಾಸ್ಯಭಾಷಣಕಾರರಾದ ಇಂದುಮತಿ ಸಾಲಿಮಠ, ‘ಉತ್ತಮ ಹೃದಯ-ಅತ್ಯುತ್ತಮ ವ್ಯಕ್ತಿ’ ಕುರಿತು ಜಯದೇಶ ಹೃದ್ರೋಗ ಆಸ್ಪತ್ರೆಯ ನಿರ್ಧೇಶಕ ಡಾ. ಸಿ.ಎನ್. ಮಂಜುನಾಥ್ , ‘ಯಕೃತ್ ಕಸಿ’ ಕುರಿತು ಯಕೃತ್ ತಜ್ಞ ಡಾ. ಎಂ. ಬಸಂತ್ ಅವರಿಂದ ಉಪನ್ಯಾಸ ನೀಡಲಿದ್ದಾರೆ.