ಡಿವಿಜಿ ಸುದ್ದಿ,ದಾವಣಗೆರೆ: ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆಯಾಗಿರುವ ಸೂಳೆಕೆರೆ ಸರ್ವೇ ಕಾರ್ಯ ವಿಳಂಬ ಕುರಿತು ಜ. 4 ರಂದು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಖಡ್ಗ ಸಂಘ, ಶಾಂತಿಸಾಗರ ಸುರಕ್ಷಣಾ ಮಂಡಳಿ ವತಿಯಿಂದ ಜಿಲ್ಲಾಧಿಕಾರಿ ಜನಸ್ಪಂದನ ಸಭೆಯಲ್ಲಿ ಸರ್ವೇ ಕಾರ್ಯ ವಿಳಂಬ ಬಗ್ಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಕರ್ನಾಟಕ ನೀರಾವರಿ ನಿಗವು ಸೂಳೆಕೆರೆಯ ಸರ್ವೇ ಕಾರ್ಯಕ್ಕೆ 11 ಲಕ್ಷಗಳ ಅನುಮೋದನೆ ನೀಡಿದೆ ಆದರೂ ಸರ್ವೇ ಕಾರ್ಯ ವಿಳಂಬವಾಗುತ್ತಿರುವುದು ಗಮನಕ್ಕೆ ಬಂದಿದೆ.
ಜ. 4 ರಂದು ಸಣ್ಣ ನೀರಾವರಿ ಅಧಿಕಾರಿಗಳು, ತಹಶೀಲ್ದಾರರು, ಸರ್ವೇ ಇಲಾಖೆ ಹಾಗೂ ಟೆಂಡರ್ ಏಜೆನ್ಸಿಯವರು ಮತ್ತು ಖಡ್ಗ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.



