ಡಿವಿಜಿ ಸುದ್ದಿ, ಮೈಸೂರು: ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮೀರ ಪೋಸ್ಟರ್ ಹಿಡಿದಿದ್ದ ಬಿ.ನಳಿನಿ ಅವರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಾಧ್ಯಮದವರತ್ತ ಕಿಡಿಕಾರಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ.
ಘಟನೆ ಸಂಬಂಧ ವಿಷಾದ ವ್ಯಕ್ತಪಡಿಸಿದ್ದಾರೆ. ಮುಂದೆ ಹೀಗೆ ವರ್ತಿಸುವುದಿಲ್ಲ ಎಂದಿದ್ದಾರೆ. ಜೆಎನ್ ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಬಿ.ನಳಿನಿ ಫ್ರೀ ಕಾಶ್ಮಿರ ಪೋಸ್ಟರ್ ಪ್ರದರ್ಶಿಸಿ ವಿವಾದಕ್ಕೀಡಾಗಿದ್ದರು.
ನಾನಿರುವ ಪರಿಸ್ಥಿತಿ ನನ್ನನ್ನು ಈ ರೀತಿ ವರ್ತಿಸುವಂತೆ ಮಾಡಿತು. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸಿದ್ದೇನೆ. ಈಗ ನನಗೆ ಪಶ್ಚಾತ್ತಾಪವಾಗುತ್ತಿದೆ. ನಾನು, ನನ್ನನ್ನು ಬದಲಾಯಿಸಿಕೊಳ್ಳಲು ಹಾಗೂ ಇನ್ನೂ ಹೆಚ್ಚಿನ ಜವಾಬ್ದಾರಿಯುತ ನಡವಳಿಕೆ ಹೊಂದಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.