ಡಿವಿಜಿ ಸುದ್ದಿ, ದಾವಣಗೆರೆ: ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ಜ.15 ರಿಂದ 19 ರವರೆಗೆ ನಡೆದ 3ನೇ ರಾಷ್ಟ್ರ ಮಟ್ಟದ 21 ವರ್ಷದೊಳಗಿನ ಖೇಲೋ ಇಂಡಿಯಾ ಯೂತ್ ಗೇಮ್ಸ್ -2020 ರಲ್ಲಿ ಖೋ-ಖೋ ಪಂದ್ಯಾವಳಿಯಲ್ಲಿ ರಾಜ್ಯ ಬಾಲಕರ ತಂಡವು ಕಂಚಿನ ಪದಕ ಪಡೆದಿದೆ.
ರಾಜ್ಯ ತಂಡದಲ್ಲಿ ದಾವಣಗೆರೆ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳಾದ ಬಾಹುಬಲಿ ಎಸ್. ಬೀಳಗಿ, ಭರತ್‍ಕುಮಾರ್ ಪಿ.ಬಿ, ಮಹಮ್ಮದ್ ತಾಸೀನ್ ಮತ್ತು ಶರತ್ ಜೆ.ಜಿ. ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಧನುಷ್ ಕೆ.ಸಿ, ಕೃಷ್ಣ ಪ್ರಸಾದ್ ಕಶ್ಯಪ್, ಶಶಿಕುಮಾರ್, ಶ್ರೀಧರ್, ಧನರಾಜ್, ಮಾರಪ್ಪ, ಚಂದ್ರಶೇಖರ್ ಹಾದಿಮನಿ, ಸೋಮಲಿಂಗ ಪೂಜಾರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಖೇಲೋ ಇಂಡಿಯಾ ಪಂದ್ಯಾವಳಿಯಲ್ಲಿ ರಾಜ್ಯ ಬಾಲಕರ ತಂಡದ ಇತರೆ ಆಟಗಾರಾಗಿದ್ದಾರೆ.
ತಂಡಕ್ಕೆ ಖೋ-ಖೋ ತರಬೇತುದಾರ ಜೆ.ರಾಮಲಿಂಗಪ್ಪ, ಕರ್ನಾಟಕ ರಾಜ್ಯ ಖೋ-ಖೋ ತಂಡದ ತರಬೇತುದಾರ ಕೆ.ಎಸ್. ಮುಕುಂದ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸ್, ಇಲಾಖೆಯ ಅಧೀಕ್ಷಕಿ ಗ್ರೇಸಿ. ಕೆ, ಇಲಾಖೆಯ ಎಲ್ಲಾ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.