ಬಿಸಾಕದಿರಿ ಎಲ್ಲೆಲ್ಲೂ ರಾಶಿ ರಾಶಿ ಅನ್ನವನ್ನು
ಹೊಟ್ಟೆ ಚುರುಕುನ್ನೆವುದು ನೋಡಲು ಏನು ಇಲ್ಲದವರನ್ನು
ನೀವು ತಿಂದಿದ್ದು ಹೆಚ್ಚಾದರೆ ಹಾಕುವಿರೋ ಕಸದತೊಟ್ಟಿಗೆ
ಚೆಲ್ಲುವುದುನ್ನು ಕಾಯವರು ನಮಗೆ ಕಾಣಾದಾಗೆ
ಹಸಿವು ತಾಳಲಾರದೆ ಎಲ್ಲೂ ಮೂಲೆಯಲ್ಲಿ ಮರೆಯಾಗಿ
ಅಮ್ಮ ಎಂದು ಕೈ ಚಾಚಿ ನಿಂತರೆ ಕ್ಯಾಕರಿಸಿ ಉಗುಳುವರು
ಎಸೆದ ಅನ್ನುವನ್ನ ತಿನ್ನಲು ಆರಿಸಲು ಕಾಯವರು
ಮನೆಯ ಮುಂದೆ ಬಂದು ಬಾಗಿಲು ಬಡಿದರೆ ಇಲ್ಲವೆನ್ನುವರು
ನಮ್ಮನ್ನು ನೋಡಿದರೆ ಕರುಣೆ ಬರದೇ ಇರದವರು
ಎಲ್ಲೆಲ್ಲೂ ಒಂದುತ್ತೂ ಊಟಕ್ಕಾಗಿ ಎಷ್ಟೋ ಪರದಾಟ
ನೋಡಲಾಗದು ಕಣ್ಣಿನಿಂದ ಇವರ ಗೊಳಾಟ
ಎಲ್ಲಾ ಇದ್ದರೂ ಅದು ಇದು ಬೇಡ ಎನ್ನುವರು ಶ್ರೀಮಂತರು
ತಿಪ್ಪೆಯಲ್ಲಿ ಕಸದಲ್ಲಿ ಇದ್ದರೆನಂತೆ ಹೊಟ್ಟೆ ತುಂಬಿದರೆ ಸಾಕು ಎನ್ನುವರು ಬಡವರು
ಹೊಟ್ಟೆ ಪಾಡಿಗಾಗಿ ತನ್ನ ದೇಹವನ್ನು ಮಾರುವರು
ಒಮ್ಮೆ ಯಾರೂ ಇವರ ಕೂಗು ಕೇಳುವರಿಲ್ಲವೆ ಯಾರು
ಕರೆದು ಕೊಟ್ಟರೆ ಹಳಿಸಿದ್ದು ಉಳಿದಿದ್ದು ಹಾಕುವರು
ಅದೇ ನಮಗೆ ಮೃಷ್ಟಾನ್ನ ಭೋಜನ ಎನ್ನುವರು
ಕೋಟಿಗಟ್ಟಲೆ ಕೊಟ್ಟು ಅನ್ನದಾನ ಮಾಡುಸುವರು ದೇವರು ದರ್ಶನಗಳಿಗೆ ತುಲಾಭಾರ ಮಾಡುವರು
ಎದುರಿಗೆ ಬಂದರೂ ಒಂದು ರೂಪಾಯಿ ಹಾಕದವರು
ಲೋಕದಲ್ಲಿ ಎಂತಹ ಜನ ಇರುವರು ನೋಡಿರೋ
-ಹೆಚ್ ಎಸ್ ಪುಷ್ಪ ಮಂಜುನಾಥ್ ದಾವಣಗೆರೆ, ಶುಶ್ರೂಷಕಿ, ಬಾಪೂಜಿ ಆಸ್ಪತ್ರೆ




