ಡಿವಿಜಿ ಸುದ್ದಿ, ಚನ್ನನಗಿರಿ: ತಾಲೂಕಿನಲ್ಲಿರುವ ಪ್ರಸಿದ್ದ ಪ್ರವಾಸಿ ತಾಣ ಹಾಗೂ ಏಷ್ಯಾ ಖಂಡದಲ್ಲೇ ಅತಿದೊಡ್ಡ 2ನೇ ಕೆರೆಯಾದ ಸೂಳೆ ಕೆರೆಗೆ ದಾವಣಗೆರೆ ಜಿಲ್ಲಾಡಳಿತದಿಂದ ಇಂದು ಬಾಗಿನ ಅರ್ಪಿಸಲಾಯಿತು.
ಶಾಸಕ ಮಾಡಾಳ್ ವೀರೂಪಾಕ್ಷಪ್ಪ, ಸಂಸದ ಜಿ. ಎಂ.ಸಿದ್ದೇಶ್ವರ್, ಶಾಸಕ ಪ್ರೊ. ಲಿಂಗಣ್ಣ ನವರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ, ತಹಶಿಲ್ದಾರ ಎನ್ ನಾಗರಾಜ್, ಚುನಾಯಿತ ಪ್ರತಿನಿಧಿಗಳು, ರೈತರು, ಸೊಳೆ ಕೆರೆ ಸುತ್ತಮುತ್ತಲಿನ ಗ್ರಾಮಸ್ಥರು ಬಾಗಿನ ಕಾರ್ಯದಲ್ಲಿ ಭಾಗಿಯಾಗಿದ್ರು.
ಬಾಗಿನ ನಂತರ ಪ್ರವಾಸಿಗರಿಗೆ ಅನುಕೂಲವಾದ ಬೋಟಿಂಗ್ ನ್ನು ಸಂಸದ, ಶಾಸಕರು ಬೋಟಿಂಗ್ ಮಾಡುವ ಮೂಲಕ ಉದ್ಘಾಟನೆ ನೆರವೇರವೇಸಿದ್ರು. ಪ್ರತಿಯೊಬ್ಬ ಪ್ರವಾಸಿಗರಿಗೆ ದೋಣಿ ವಿಹಾರ ನಡೆಸುವುದು ಯೋಜನೆಯ ಉದ್ದೇಶವಾಗಿದೆ. ಪ್ರವಾಸಿಗರಿಗೆ ಒಂದು ಕಿಲೋ ಮೀಟರ್ ದೋಣಿ ವಿಹಾರಕ್ಕೆ ನೂರು ರೂಪಾಯಿ ದರ ನಿಗದಿಪಡಿಸಲಾಗಿದೆ.