Connect with us

Dvgsuddi Kannada | online news portal | Kannada news online

ಸ್ಮಾರ್ಟ್ ಸಿಟಿ ದಾವಣಗೆರೆ  ಮೊದಲ ಸ್ಥಾನ ಮುಂದುವರೆಸಲು ಸಹಕರಿಸಿ: ರವೀಂದ್ರ ಬಿ.ಮಲ್ಲಾಪುರ

ಪ್ರಮುಖ ಸುದ್ದಿ

ಸ್ಮಾರ್ಟ್ ಸಿಟಿ ದಾವಣಗೆರೆ  ಮೊದಲ ಸ್ಥಾನ ಮುಂದುವರೆಸಲು ಸಹಕರಿಸಿ: ರವೀಂದ್ರ ಬಿ.ಮಲ್ಲಾಪುರ

ಡಿವಿಜಿ ಸುದ್ದಿ, ದಾವಣಗೆರೆ: ನಾಗರಿಕರಿಗೆ ಯೋಗ್ಯ ಜೀವನ ಮಟ್ಟವನ್ನು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ನಡೆಸುತ್ತಿರುವ ಸ್ಮಾರ್ಟ್ ಸಿಟಿಸ್ ಮಿಷನ್ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ದಾವಣಗೆರೆ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದು, ಇನ್ನು ಮುಂದೆಯೂ ಮೊದಲನೇ ಸ್ಥಾನದಲ್ಲಿ ಮುಂದುವರಿಸಲು  ದಾವಣಗೆರೆ ಜಿಲ್ಲೆಯ ನಾಗರಿಕರರು ಸಹಕರಿಸಬೇಕೆಂದು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ.ಬಿ ಮಲ್ಲಾಪುರ ತಿಳಿಸಿದರು.

ಸ್ಮಾರ್ಟ್ ಸಿಟಿ ಲಿಮಿಡೆಟ್ ಕಚೇರಿಯಲ್ಲಿ  ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿಗೆ ಸಂಬಂಧಿಸಿದಂತೆ ಫೆ.01 ರಿಂದ ಸಮೀಕ್ಷೆ ಕಾರ್ಯ ಆರಂಭಗೊಂಡಿದ್ದು, ಇನ್ನು 4 ದಿನ ಸಮೀಕ್ಷೆ ನಡೆಯಲಿದೆ. ಹೀಗಾಗಿ ದಾವಣಗೆರೆಯ ಸಮಸ್ತ ನಾಗರಿಕರು ಸಮೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವುದರ ಮೂಲಕ ದಾವಣಗೆರೆ ಜಿಲ್ಲೆಯನ್ನು ಮೊದಲನೇ ಸ್ಥಾನದಲ್ಲಿ ಮುಂದುವರೆಸಬೇಕೆಂದು ತಿಳಿಸಿದರು.

ಈ ಸಮೀಕ್ಷೆಯು ಆನ್‍ಲೈನ್ ಸಮೀಕ್ಷೆಯಾಗಿದೆ. ಸಾರ್ವಜನಿಕರು https://eol121019.org/citizenFeedback ಲಿಂಕ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಬಹುದು. ಇದರಲ್ಲಿ ಶಿಕ್ಷಣ, ಆರೋಗ್ಯ, ಒಳಚರಂಡಿ, ವಿದ್ಯುತ್ ಕುಡಿಯುವ ನೀರು, ಸುರಕ್ಷತೆ, ಘನ ತ್ಯಾಜ್ಯ ನಿರ್ವಹಣೆ ಇತ್ಯಾದಿ ವಿಷಯಗಳ ಕುರಿತು ಪ್ರಶ್ನೆಗಳನ್ನು ನೀಡಲಾಗಿದ್ದು, ದೇಶವ್ಯಾಪ್ತಿ ಈ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.

ದಾವಣಗೆರೆ ನಗರದ ಭವಿಷ್ಯವನ್ನು ಉನ್ನತಕ್ಕೇರಿಸಲು ಸಾರ್ವಜನಿಕರು ಸಮೀಕ್ಷೆಯಲ್ಲಿ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಈ ಸಮೀಕ್ಷೆಯಲ್ಲಿರುವ ಪ್ರಶ್ನೆಗಳಿಗೆ ಧನಾತ್ಮಕ ಹಾಗೂ ಋಣಾತ್ಮಕ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದ್ದು, ಸಮಸ್ಯೆಯ ಮೂಲ ಎಲ್ಲಿ ಎಂಬುದರ ಅಧ್ಯಯನ ನಡೆಸುವ ಮೂಲಕ ಮುಂಬರುವ ದಿನಗಳಲ್ಲಿ ಸರಿಯಾದ ಯೋಜನೆ ರೂಪಿಸಲು ಸಹಾಯಕವಾಗುತ್ತದೆ ಎಂದರು.

ಕಳೆದ 25 ದಿನಗಳಿಂದ ಆರಂಭವಾಗಿರುವ ಈ ಸಮೀಕ್ಷೆಯಲ್ಲಿ ಭಾರತ ಸರ್ಕಾರವು ಜನಸಂಖ್ಯೆ ಆಧಾರದ ಮೇಲೆ ನೀಡಿರುವ ಗುರಿಗೆ ಫೆ. 26 ರಂತೆ 114 ಸ್ಮಾರ್ಟ್ ನಗರಗಳಲ್ಲಿ ದಾವಣಗೆರೆ ನಗರವು 40 ನೇ ಸ್ಥಾನದಲ್ಲಿದ್ದು, ರಾಜ್ಯವಾರು ಕರ್ನಾಟಕ ರಾಜ್ಯವು 26 ನೇ ಸ್ಥಾನದಲ್ಲಿ ಹಾಗೂ ಕರ್ನಾಟಕದಲ್ಲಿ ಜಿಲ್ಲಾವಾರು ದಾವಣಗೆರೆ ನಗರವು 1ನೇ ಸ್ಥಾನದಲ್ಲಿದೆ. ದಾವಣಗೆರೆ ನಗರಕ್ಕೆ 4,615 ಜನರು ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಗುರಿ ನೀಡಲಾಗಿತ್ತು. ಆದರೆ ದಾವಣಗೆರೆ ಜಿಲ್ಲೆಯು ಹೆಚ್ಚಿನ ಗುರಿಯನ್ನು 7,852 (170.14%) ಸಾಧಿಸುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದೆ. ಬೆಂಗಳೂರಿಗೆ 90,266 ಜನರ ಗುರಿ ನಿಗದಿಪಡಿಸಲಾಗಿದ್ದು, 45,803 ಹಾಗೂ ಹುಬ್ಬಳ್ಳಿ ಧಾರವಾಡ ಜಿಲ್ಲೆಗೆ 10,095 ಗುರಿ ನೀಡಲಾಗಿದ್ದು, 12,287 ಜನರು ಅಭಿಪ್ರಾಯ ಹಂಚಿಕೊಂಡಿದ್ದಾರೆಂದು ತಿಳಿಸಿದರು.

ಸಮೀಕ್ಷೆಗೆ ಕೇವಲ 03 ದಿನಗಳು ಮಾತ್ರ ಬಾಕಿಯಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಜಿಲ್ಲೆಯನ್ನು ಮೊದಲನೇ ಸ್ಥಾನದಲ್ಲಿ ಮುಂದುವರೆಯಲು ಸಹಕರಿಬೇಕು. ಸುಲಲಿತ ಜೀವನ ಸೂಚ್ಯಂಕ ಮಟ್ಟದ ಬಗ್ಗೆ ಅಭಿಪ್ರಾಯ ತಿಳಿಸಲು https://eol121019.org/citizenFeedback ಆನ್‍ಲೈನ್ ಲಿಂಕ್ ಮತ್ತು @esseofliving2019 ಫೇಸ್‍ಬುಕ್,@esseofliving19, @MoHUA, @SmartcitiesMission ಟ್ವಿಟರ್ ಹಾಗೂ ಕ್ಯೂ.ಆರ್ ಕೋಡ್ ಅನ್ನು ಸ್ಕಾನ್ ಮಾಡುವುದರ ಮೂಲಕ ತಮ್ಮ ಅಭಿಪ್ರಾಯ ತಿಳಿಸಬಹುದು ಎಂದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top