ಡಿವಿಜಿ ಸುದ್ದಿ, ಮೈಸೂರು: ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಡೆಯಲ್ಲ. ಜೆಡಿಎಸ್ ಮತ ನಮಗೆ ಬರಲ್ಲ. ನಮ್ಮ ಮತ ಅವರಿಗೆ ಹೋಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಏಳೆಂಟು ಸ್ಥಾನ ಗೆಲ್ಲುತ್ತಿತ್ತು. ಅಂದು ಮೈತ್ರಿಗೆ ವಿರೋಧ ಮಾಡಿದವನು ನಾನು ಒಬ್ಬನೇ. ನನ್ನದು ಏಕಾಂಗಿ ದನಿಯಾಗಿತ್ತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈತ್ರಿ ಬೇಡ ಎಂದು ನಾನು ಅಂದೇ ಹೇಳಿದ್ದೆ. ಬಹಳ ವರ್ಷಗಳಿಂದ ನಾವಿಬ್ಬರು ಹಳೆ ಮೈಸೂರಿನಲ್ಲಿ ಪರಸ್ಪರ ಹೋರಾಟ ನಡೆಸಿಕೊಂಡು ಬಂದವರು ಎಂದರು.



