ಡಿವಿಜಿಸುದ್ದಿ.ಕಾಂ, ದಾವಣಗೆರೆ: ಪೋಷಕರು ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಹಿರಿಯ ನ್ಯಾಯವಾದಿ ರೇವಣ್ಣ ಬಳ್ಳಾರಿ ಹೇಳಿದರು.
ನಗರದ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಆಯೋಜಿಸಿದ್ದ 39ನೇ ಸಂಕಷ್ಟ ಹರ ಚತುರ್ಥಿ ಹಾಗೂ ಸುಜ್ಞಾನ ಕಿರಣ ಕಾರ್ಯಕ್ರಮದ ಉದ್ಘ್ಯಾಟಿಸಿ ಮಾಡಿದ ಅವರು, ಯೋಗ್ಯತೆ ಇರುವ ಮಕ್ಕಳಿಗೆ ಆಸ್ತಿ ಮಾಡುವ ಅವಶ್ಯಕತೆ ಇಲ್ಲ. ಯೋಗ್ಯತೆ ಇಲ್ಲದ ಮಕ್ಕಳಿಗೆ ಆಸ್ತಿ ಮಾಡದೆ, ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾಡಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆವರಗೊಳ್ಳದ ಒಂಕಾರ ಸ್ವಾಮೀಜಿ ಆಶೀರ್ವಾದ ನೀಡಿದರು. ಚಿತ್ರದುರ್ಗದ ಹಾಸ್ಯ ಕಲಾವಿದ ಪಿ. ಜಗನ್ನಾಥ್ ಹಾಸ್ಯದ ಮೂಲಕ ನೆರೆದಿದ್ದವರನ್ನು ರಂಜಿಸಿದರು. ನೂರಾರು ಭಕ್ತರು ಭಾಗ ವಹಿಸಿದ್ದರು.