ಡಿವಿಜಿ ಸುದ್ದಿ, ರಾಮನಗರ: ಮಾಜಿ ಸಚಿವ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ರಾಮನಗರದಲ್ಲಿ 114 ಅಡಿ ಎತ್ತರದ ಏಸು ಪ್ರತಿಮೆ ಅನಾವಣರ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಪರ ವಿರೋಧ ಚರ್ಚೆ ಶುರುವಾಗಿದೆ.
ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಿಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಿರುವ, ಈ ಏಕಶಿಲೆ ವಿಗ್ರಹ 114 ಅಡಿ ಎತ್ತರದ್ದು. ಗುಜರಾತ್ ನಲ್ಲಿ ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಿಸಿದ್ದಕ್ಕೆ ಲೇವಡಿ ಮಾಡಿದ್ದ ಡಿಕೆ ಸಹೋದರರು ಈಗ ಮಾಡುತ್ತಿರುವುದು ಏನು ಎಂದು ನೆಟ್ಟಿಗರು ಪ್ರಶ್ನಿಸಿದ್ಧಾರೆ. ಪ್ರತಿಮೆ ನಿರ್ಮಾಣದ ಶಿಲಾನ್ಯಾಸವನ್ನು ಕ್ರಿಸ್ ಮಸ್ ಹಬ್ಬದಂದು ನೆರವೇರಿಸಿದ್ದರು.
ಬಿಜೆಪಿ ಸಂಸದ ಅನಂತ್‌ಕುಮಾರ್ ಹೆಗಡೆ ಟ್ವೀಟ್ ಮೂಲಕ ಡಿ.ಕೆ.ಶಿವಕುಮಾರ್ ಅವರನ್ನು ಕುಟುಕಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ಪರೋಕ್ಷವಾಗಿ ಗುಲಾಮ ಎಂದು ಕರೆದಿದ ಅವರು, ಇಲ್ಲೊಬ್ಬ ತಿಹಾರ್ ಜೈಲಿನಿಂದ ವಾಪಸ್ ಬಂದ ಮಹನೀಯ, ಯಾವುದೋ ಹುದ್ದೆಯ ಆಸೆಯೊಂದಿಗೆ, ಅವರ ಇಟಲಿಯಮ್ಮನನ್ನು ಶ್ರದ್ಧೆ ತೋರಲು ಯೇಸುವಿನ ಪ್ರತಿಮೆ ನಿರ್ಮಿಸಲು ಹೊರಟಿದ್ದಾನೆ .ರಾಜಕೀಯ ಪೈಪೋಟಿಯಲ್ಲಿ ಕಾಂಗ್ರೆಸ್‌ನಲ್ಲಿ ಹೆಚ್ಚಿನ ಗುಲಾಮರು ಅಖಾಡಕ್ಕೆ ಇಳಿದರು ಅಚ್ಚರಿಯಿಲ್ಲ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಏಸು ಪ್ರತಿಮೆ ಅನಾವರಣ ಮಾಡಿದ ಬಗ್ಗೆ ಸಚಿವ ಈಶ್ವರಪ್ಪ ಸಹ ಟೀಕಿಸಿದ್ದು,ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ವಿರೋಧಿಸಿದ್ದ ಕಾಂಗ್ರೆಸ್, ವ್ಯಾಟಿಕನ್ ನಲ್ಲಿ ಹುಟ್ಟಿದ ಏಸುವಿನ ಪ್ರತಿಮೆ ನಿರ್ಮಿಸಲು ಹೊರಟಿದೆ ಎಂದಿದ್ದಾರೆ.
ಪ್ರಮುಖ ಪ್ರತಿಕ್ರಿಯೆಗಳು
ಹಿಂದೂ ಮುಗ್ದ ಜನರ ಮತಾಂತರಕ್ಕೆ ನನ್ನ ವಿರೋಧ. ಇದು ಅಲ್ಲಿನ ಮೊದಲ ಚಿತ್ರ. ನಾವು ಇಂತಹ ಘಟನೆಗಳನ್ನು ಕೇರಳದಲ್ಲಿ ನೋಡ್ತೀವಿ. ಮೊದಲು ಬಂದು ಶಿಲುಬೆ ಸ್ಥಾಪಿಸುತ್ತಾರೆ. ಆಮೇಲೆ ಆ ಜಾಗವನ್ನು ವಶ ಪಡಿಸಿಕೊಳ್ಳುತ್ತಾರೆ. ಅಲ್ಲಿಯ ಜನರನ್ನು ಮತಾಂತರ ಮಾಡುತ್ತಾರೆ. ಆಮೇಲೆ ಒಂದು ಗ್ರಾಮವೇ ಸೃಷ್ಟಿ ಆಗುತ್ತೆ. ಇಂತಹ ಉದಾಹರಣೆಗಳು ಕೇರಳದಲ್ಲಿ ಧಾರಾಳವಾಗಿ ಸಿಗುತ್ತದೆ. ನಮ್ಮಿಂದ ಏನು ಮಾಡಕ್ಕಾಗಲ್ಲ. ನಮ್ಮವರು ಜಾತಿ ಜಾತಿ ಆ ನೋವಿನಿಂದ ಇನ್ನಿತರ ಧರ್ಮಕ್ಕೆ ಕನ್ವರ್ಟ್ ಆಗ್ ಬಿಡುತ್ತಾರೆ. ಇದೇ, ನೋವಿನ ವಿಷಯ. ಅವರ ಧರ್ಮ ವಿರೋಧಿ ನಾನಲ್ಲ. ಅವರು ಮಾಡುತ್ತಿರುವ ಹಿಂದೂ ಮುಗ್ದ ಜನರ ಮತಾಂತರಕ್ಕೆ ನನ್ನ ವಿರೋಧ ನೆಟ್ಟಿಗ ವಿರೋಧ ವ್ಯಕ್ತಪಡಿಸಿದ್ಧಾನೆ.
ಬಾಲಗಂಗಾಧರನಾಥ ಸ್ವಾಮಿಗಳ ಹಾಗೂ ಶ್ರೀ ಶಿವಕುಮಾರ ಸ್ವಾಮಿಗಳ ಪುತ್ಥಳಿ ನಿರ್ಮಿಸಿ ಸನ್ಮಾನ್ಯ ಡಿ ಕೆ ಶಿವಕುಮಾರ್ ರವರೇ ನಮ್ಮ ಜಿಲ್ಲೆಯವರಾದ ಬಾಲಗಂಗಾಧರನಾಥ ಸ್ವಾಮಿಗಳ ಹಾಗೂ ಶ್ರೀ ಶಿವಕುಮಾರ ಸ್ವಾಮಿಗಳ ಪುತ್ಥಳಿ ನಿರ್ಮಿಸಿ ನಿಮಗೊಂದು ಕೀರ್ತಿ ಬರುತ್ತದೆ. ನಿಮಗೆ ದೇವರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿ ಆಯಸ್ಸು ಸುಖ ಶಾಂತಿ ನಮ್ಮದಿ ನಿಡಲಿ ಎಂದು ದೇವರಗೇ ಬೇಡಿಕೊಳ್ಳುತ್ತೇನೆ ಸರ್…
ಸೋನಿಯಾ ಗಾಂಧಿಯ ಕೃಪೆಯಿಂದ ಮುಂದಿನ ಬಾರಿ ಮುಖ್ಯಮಂತ್ರಿ ದೇಶದಲ್ಲಿ ಸಮಾನತೆಯ ಧರ್ಮ ಕಪಾಡಲು ಶ್ರಮಿಸಿದ. ಶಾಂತಿ ನೆಲಸಲು. ಕಾರಣೀಭೂತರಾದ ಏಸುವಿನ ಸಲಹೆಗಳನ್ನೂ ಪಾಲಿಸಲು ದೇಶದ ಜನತೆಗೆ ದಯಪಾಲಿಸಲಿ. ಸೋನಿಯಾ ಗಾಂಧಿಯ ಕೃಪೆಯಿಂದ ಮುಂದಿನ ಬಾರಿ ಮುಖ್ಯಮಂತ್ರಿ ಬಯಸಿದ ಹಾಗೆ ಕಾಣುತ್ತಿದೆ , ಅದರ ಫಲವೇ ಇದು.. ಎಂದಿದ್ಧಾರೆ