ಡಿವಿಜಿ ಸುದ್ದಿ, ಭದ್ರಾವತಿ: ಬಾರ್ ಗಳಲ್ಲಿ ಮದ್ಯ ಕಳ್ಳತನ ಮಾಡಿದ 04 ಜನ ಆರೋಪಿತರ ಬಂಧಿಸಿದ ಪೊಲೀಸರು, ಆರೋಪಿಗಳಿಂದ 20,300 ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಏ. 16 ರಂದು ರಾತ್ರಿ ವೇಳೆಯಲ್ಲಿ ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದ ಶ್ರೀ ವೆಂಕಟೇಶ್ವರ ವೈನ್ ಸ್ಟೋರ್ ನಲ್ಲಿ ರೂ. 23,000 ಮೌಲ್ಯದ ಮದ್ಯದ ಪೌಚ್ ಗಳು ಕಳ್ಳತನವಾಗಿರುವ ದೂರು ನೀಡಲಾಗಿತ್ತು. ಈ ದೂರಿನ ಅನ್ವಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಆರೋಪಿಗಳಾದ ಸೋಮಶೇಖರ್ @ ಪಂದಿ (29), ಜೆ. ಮಣಿಕಂದನ್@ ಮಣಿ (27), ಆನಂದ @ ಹೊಟ್ಟೆ (28), ರಾಜಾನಾಯ್ಕ@ (19) ಬಂಧಿಸಲಾಗಿದೆ. ಶ್ರೀ ವೆಂಕಟೇಶ್ವರ ವೈನ್ ಸ್ಟೋರ್ ನಲ್ಲಿ ಕಳುವು ಮಾಡಿದ ಮದ್ಯ ಪೌಚ್ ಗಳನ್ನು ಮಾರಾಟ ಮಾಡಿ ಗಳಿಸಿದ ಹಣ ರೂ 20,300 ನಗದು ಹಾಗು ಕೃತ್ಯಕ್ಕೆ ಬಳಸಿದ ರೂ 45,000 ಮೌಲ್ಯದ ಪಲ್ಸರ್ ಬೈಕ್ ನ್ನು ವಶಪಡಿಸಿಕೊಂಡು 4 ಜನ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರ್ ಪಡಿಸಿದೆ.
ಪ್ರಕರಣದಲ್ಲಿ ಆರೋಪಿತರು ಹಾಗೂ ಕಳುವಾದ ಮದ್ಯದ ಪೌಚ್ ಗಳ ಪತ್ತೆಗೆ ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯಕ್ ಅವರ ಮಾರ್ಗದರ್ಶನದಲ್ಲಿ, ಭದ್ರಾವತಿ ಗ್ರಾಮಾಂತರ ವೃತ್ತ ನಿರೀಕ್ಷಕ ಮಂಜುನಾಥ ಈ.ಓ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕಿ ಭಾರತಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿ, ಏ. 24 ರಂದು ಭದ್ರಾವತಿ ತಾಲೂಕು ಡಿ.ಜಿ ಹಳ್ಳಿ ತಾಂಡದ ವಾಸಿಗಳಾದ ಈ ಕೆಳಕಂಡ 4 ಜನ ಆರೋಪಿತರನ್ನು ಬಂಧಿಸಿದ್ದಾರೆ.



