ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ವಾರಿಯರ್ಸ್ ವಿರುದ್ಧ ಹಲ್ಲೆ ಮಾಡಿದ ಪಾದರಾಯನಪುರ ಪುಂಡರ ರಕ್ಷಣೆ ನಿಂತ ಶಾಸಕ ಜಮೀರ್ ಅಹಮ್ಮದ್ ದೇಶದ್ರೋಹಿ. ತಮ್ಮ ರಾಜಕೀಯ ನೆಲೆ ಭದ್ರ ಮಾಡಿಕೊಳ್ಳಲು ಅಂಥವರಿಗೆ ಬೆಂಬಲಿಸುವುದು ಸರಿಯಲ್ಲ. ಜಮೀರ್ ಶಾಸಕರಾಗಲು ನಾಲಾಯಕ್ . ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಶಾಸಕ ಜಮೀರ್ ಅಹಮ್ಮದ್ ಬುದ್ಧಿವಂತನಲ್ಲ, ಆತ ಅರೆ ದಡ್ಡ. ಆತನಿಗೆ ನಟನೆಯ ಚಾಕಚಕ್ಯತೆ ಗೊತ್ತಿದ್ದು, ಆತ ನಂಬರ್ ಒನ್ ದೇಶದ್ರೋಹಿ. ಜಮೀರ್‍ಗೆ ಭಾರತೀಯ ಸಂಸ್ಕೃತಿ ಇಲ್ಲ. ಪಾದರಾಯನಪುರ ಪುಂಡರ ರಕ್ಷಣೆಗೆ ಜಮೀರ್ ನಿಂತಿದ್ದಾರೆ ಎಂದರು.
ಜಮೀರ್, ಮನಿ, ಮ್ಯಾನ್ ಪವರ್ ಇದೆ ಅಂತ ಜಮೀರ್ ಅನ್ಕೊಂಡಿರಬಹುದು. ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಜಮೀರ್ ಅಹಮದ್ 420. ಗುಜರಿ ವ್ಯಾಪಾರ ಮಾಡಿ ರಾಜಕೀಯಕ್ಕೆ ಬಂದು ನಟನೆ ಮಾಡ್ತಿದ್ದಾರೆ ಎಂದರು. ಕೊರೊನಾ ಸಂದರ್ಭದಲ್ಲಿ ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಅದು ಬಿಟ್ಟು ಪುಂಡರಿಗೆ ರಕ್ಷಣೆಯಾಗಿ ನಿಲ್ಲೋದು ಸರಿಯಲ್ಲ.



