ಡಿವಿಜಿ ಸುದ್ದಿ, ರಾಯಚೂರು: ಕೊರೊನಾ ವೈರಸ್ ನಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿ ಇರುವವರಿಗೆ ಕೆಲವು ಸಂಘ ಸಂಸ್ಥೆಗಳು ಆಹಾರ ಕಿಟ್ ಹಂಚಿಕೆ ಮಾಡುತ್ತಿವೆ. ಅದೇ ರೀತಿ ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ಅವರು ರಾಯಚೂರಿಗೆ ಆಹಾರ ಕಿಟ್ ನೀಡಿದ್ದಾರೆ. ಬಿಜೆಪಿ ಮುಖಂಡರು ಕಿಟ್ ಹಂಚಿಕೆಯಲ್ಲಿ ತಮ್ಮ ಫೋಟೋ ಹಾಕಿಕೊಂಡು ಪ್ರಚಾರದ ರಾಜಕಾರಣ ಮಾಡಿದ್ದಾನೆ.

ಅಕ್ಷಯ ಪಾತ್ರೆ ಯೋಜನೆಯಡಿ ಇನ್ಫೋಸಿಸ್ ನಿಂದ ನೀಡಲಾಗಿದ್ದ ಕಿಟ್ ಗಳ ಮೇಲೆ ತಮ್ಮ ಫೋಟೋ ತಮ್ಮ ಸಂಸ್ಥೆ ಹೆಸರು ಹಾಕಿಕೊಂಡು ಕಿಟ್ ವಿತರಿಸುತ್ತಿದ್ದಾರೆ.ರಾಯಚೂರಿನ ಬಿಜೆಪಿ ಮುಖಂಡ ತ್ರಿವಿಕ್ರಮ ಜೋಶಿ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಮೂರ್ತಿಯಿಂದ ಪ್ರಚಾರ ನಡೆದಿದೆ.ಬಿಜೆಪಿ ಮುಖಂಡರ ಇಂತಹ ಕೀಳು ಮಟ್ಟದ ಪ್ರಚಾರಕ್ಕೆ, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



