ಲಕ್ನೋ: ಶತಕೋಟಿ ಭಾರತೀಯರ ಶತಮಾನಗಳ ಹೋರಾಟದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಭೂಮಿ ಪೂಜೆ ಕಾರ್ಯಕ್ರಮ ನೆರವೇರಲಿದೆ. ರಾಮಂದಿರ ನಿರ್ಮಾಣದೊಂದಿಗೆ ಭಾರತದಲ್ಲಿ ರಾಮರಾಜ್ಯ ಸ್ಥಾಪನೆಯಾಗಲಿದೆ ಎಂದು ಯೋಗಗುರು ಬಾಬಾ ರಾಮ್‍ದೇವ್ ಹೇಳಿದ್ದಾರೆ.
ಬೆಳಗ್ಗೆ ಆಂಜನೇಯನ ದೇವಾಲಯಕ್ಕೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆಗಸ್ಟ್ 05 ದೇಶದ ಜನರಿಗೆ ಐತಿಹಾಸಿಕ ದಿನವಾಗಿದೆ. ಈ ದಿನವನ್ನು ನಾವೆಲ್ಲರೂ ದೀರ್ಘಕಾಲ ನೆನಪಿನಟ್ಟಿಕೊಳ್ಳುವಂತಹದು. ರಾಮದೇವಾಲಯದ ನಿರ್ಮಾಣದೊಂದಿಗೆ ಭಾರತದಲ್ಲಿ ರಾಮರಾಜ್ಯ ಸ್ಥಾಪನೆಯಾಗಲಿದೆ ಎಂಬ ವಿಶ್ವಾಸವಿದೆ ಎಂದರು.
ಪ್ರಧಾನಿ ಮೋದಿಯವರು ಆಂಜನೇಯನ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಾಲಯವನ್ನು ಈಗಾಗಲೇ ಸ್ಯಾನಿಟೈಸ್ ಮಾಡಲಾಗಿದೆ. ಹನುಮಂತ ಇಲ್ಲದೇ ರಾಮನ ಯಾವುದೇ ಕೆಲಸ ಆರಂಭಗೊಳ್ಳುವುದಿಲ್ಲ. ಈ ಕಾರಣಕ್ಕೆ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರು ಮೊದಲು ಹನುಮಂತನ ಪೂಜೆ ಮಾಡಿ ಆಶೀರ್ವಾದ ಪಡೆದ ಬಳಿಕ ರಾಮ ದೇವಸ್ಥಾನದ ಭೂಮಿ ಪೂಜೆಗೆ ತೆರಳುತ್ತಿದ್ದಾರೆ.