ಡಿವಿಜಿಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಭಾರೀ ಮಳೆ ಸುರಿದು ಜನ ಜೀವನ ತತ್ತರಿಸಿ ಹೋಗಿದ್ದಾರೆ. ಹಾನಿ ಸಂಭವಿಸಿ ನಾಲ್ಕು ದಿನದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಇವತ್ತು ಸಭೆ ನಡೆಸಿದರು. ಈ ಸಭೆಯಲ್ಲಿ ಜಿಲ್ಲೆಯ ಬಿಜೆಪಿ ಪಕ್ಷದ ಶಾಸಕರ ಸುಳಿವೇ ಇರಲಿಲ್ಲ. ಸಭೆಯಲ್ಲಿ ಶಾಸಕ ಎಸ್. ಎ ರವೀಂದ್ರನಾಥ್ ಭಾಗಿಯಾಗಿದ್ದರೂ, ಒಂದು ಮಾತು ಕೂಡ ಮಾತನಾಡಲಿಲ್ಲ..
ಹೊನ್ನಾಳಿ ಶಾಸಕರು ಅನಾರೋಗ್ಯ ನಿಮಿತ ಆಸ್ಪತ್ರೆಯಲ್ಲಿದ್ದಾರೆ. ಇನ್ನುಳಿದಂತೆ ಜಗಳೂರು ಶಾಸಕ ಎಸ್.ವಿ ರಾಮಚಂದ್ರಪ್ಪ,ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ. ಲಿಂಗಣ್ಣ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸಭೆಯಿಂದ ಹೊರಟರು.



