ಡಿವಿಜಿ ಸುದ್ದಿ,ದಾವಣಗೆರೆ: ಕಳೆದ ರಾತ್ರಿ ಸುರಿದ ಗಾಳಿ ಮಳೆಗೆ ತಾಲ್ಲೂಕಿನ ಹಲವೆಡೆ ಭತ್ತದ ಗದ್ದೆಗಳು ನೀರುಪಾಲಾಗಿವೆ. ತಾಲೂಕಿನ ಆವರಗೊಳ್ಳ, ಕಡ್ಲೇಬಾಳು,ಕಕ್ಕರಗೊಳ್ಳ, ಬೇತೂರು, ಕಾಡಜ್ಜಿ, ಮಾಗಾನಹಳ್ಳಿ, ಬೂದಾಳು ಸೇರಿದಂತೆ ಹಲವು ಗ್ರಾಮಗಳಲ್ಲಿ ಜಮೀನುಗಳಲ್ಲಿ ನೀರು ನಿಂತಿದೆ.
ಸುಮಾರು ೫೦೦ ರಿಂದ ೬೦೦ ಎಕರೆಯಲ್ಲಿ ಬೆಳೆಯಲಾಗಿದ್ದ ಭತ್ತ ನೀರಿನಲ್ಲಿ ಕೊಚ್ಚಿಹೋಗಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆ ಸಂಪೂರ್ಣ ನೀರುಪಾಲಾಗಿದೆ. ಕಳೆದ ವರ್ಷ ತೀವ್ರ ಬರಗಾಲದಿಂದ ಕಂಗೆಟ್ಟು ಹೋಗಿದ್ದ ರೈತರು ಈ ಬಾರಿ ಬಂದ ಮಳೆಗೆ ಸಂತಸಗೊಂಡಿದ್ದರು. ಆದರೆ ತಡವಾಗಿ ಬಂದ ಮಳೆ ಅವಾಂತರವನ್ನೇ ಸೃಷ್ಠಿಸಿರುವುದು ರೈತರಿಗೆ ನೋವುಂಟುಮಾಡಿದೆ.
ಭತ್ತದ ಬೆಳೆ ಈಗಾಗಲೇ ಕಟಾವಿಗೆ ಬಂದಿದ್ದು ಇನ್ನೆರಡು ಮೂರುದಿನಗಳಲ್ಲಿ ರೈತರು ಭತ್ತದ ಕಟಾವಿಗೆ ಸಜ್ಜಾಗುತ್ತಿದ್ದರ. ಆದರೆ ನಿನ್ನೆ ರಾತ್ರಿಯ ಅಕಾಲಿಕ ಮಳೆಯಿಂದಾಗಿ ಕಷ್ಟಪಟ್ಟು ಬೆಳೆದ ಬೆಳೆ ನೆಲ ಸಮವಾಗಿದೆ.



