ಡಿವಿಜಿ ಸುದ್ದಿ, ಉಡುಪಿ: ಪೇಜಾವರ ಮಠದಲ್ಲಿ ಅಡ್ಡಾಡುತ್ತಿದ್ದ ಹೆಬ್ಬಾವಿನ ಮರಿಯನ್ನು ಸ್ವತಃ ಪೇಜಾವರ ಮಠದ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥರು ರಕ್ಷಣೆ ಮಾಡಿದ್ದಾರೆ.
ಶ್ರೀಗಳು ಹಾವಿನ ಮರಿಯನ್ನು ಹಿಡಿದು ಸಣ್ಣದೊಂದು ಪೈಪ್ ನಲ್ಲಿ ತುಂಬಿದ್ದಾರೆ. ನಂತರ ಅದನ್ನು ಮಠದ ತೋಟಕ್ಕೆ ತಂದು ಬಿಟ್ಟಿದ್ದಾರೆ. ಮಾಮೂಲಿಯಾಗಿ ಹೆಬ್ಬಾವು ಹತ್ತಾರು ಸಂಖ್ಯೆಯಲ್ಲಿ ಮೊಟ್ಟೆಯಿಟ್ಟು ಮರಿ ಮಾಡುತ್ತದೆ. ಹರಿದಾಡಲು ಶುರು ಮಾಡಿದ ಮೇಲೆ ಮರಿಗಳು ಸ್ವತಂತ್ರ ಆಗುತ್ತವೆ. ಹೀಗೆ ಗುಂಪಿನಿಂದ ಬೇರ್ಪಟ್ಟ ಹೆಬ್ಬಾವಿನ ಮರಿ ಮಠದೊಳಗೆ ಬಂದಿತ್ತು.
ದನ ಕರುಗಳಿರುವ ಕೊಟ್ಟಿಗೆಗೆ ಹೋಗಿತ್ತು. ಇದನ್ನು ನೋಡಿದ ಶ್ರೀಗಳು ಹೆಬ್ಬಾವಿನ ಮರಿ ರಕ್ಷಣೆ ಮಾಡಿದ್ದಾರೆ.ಈ ಬಗ್ಗೆ ಮಾತನಾಡಿದ ಶ್ರೀಗಳು ನೀಲಾವರ ಗೋಶಾಲೆ ಗ್ರಾಮೀಣ ಭಾಗದಲ್ಲಿ ಇರುವುದರಿಂದ ಕಾಡುಪ್ರಾಣಿಗಳ ಓಡಾಟ ಸಾಮಾನ್ಯ. ಹೆಬ್ಬಾವಿನ ಮರಿ ಆಗಿರುವುದರಿಂದ ಅದನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ. ಕೃಷಿ ಚಟುವಟಿಕೆ ಮಾಡುವಾಗ ಹಾವು ಕಾಣ ಸಿಗುತ್ತಿರುತ್ತದೆ ಎಂದರು.