- ಹೆಚ್. ಎಮ್. ಸಣ್ಣಗೌಡ್ರ
ವಿಷಯ ತಜ್ಞರು (ಮಣ್ಣು ವಿಜ್ಞಾನ), ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರ,ದಾವಣಗೆರೆ
ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 43,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ಅಡಿಕೆ ಬೆಳೆಯುತ್ತಿದ್ದು, ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕೆಲವು ಕಡೆ ಕಾಯಿಗಳೂ ಉದುರಿ ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಪ್ರಸ್ತುತ ಅತಿಯಾದ ಬಿಸಿಲಿನ ತಾಪದಿಂದ ಅಡಿಕೆಯಲ್ಲಿ ಕೆಂಪು ನುಸಿ ಬಾಧೆ ಹೆಚ್ಚಾಗಿ ಕಂಡುಬಂದಿದ್ದು, ರೈತರಲ್ಲಿ ಆತಂಕ ಮೂಡಿಸುವುದರ ಜೊತೆ ಆರ್ಥಿಕ ನಷ್ಟವನ್ನು ತಂದೊಡ್ಡುತ್ತಿದೆ.
ಕೆಂಪು ನುಸಿ ಬಾಧೆಯ ಲಕ್ಷಣಗಳು:
- 5 ವರ್ಷ ಒಳಗಿರುವ ಗಿಡಗಳಲ್ಲಿ ಬಾಧೆ ಹೆಚ್ಚು
- ಎಲೆಯ ಕೆಳ ಭಾಗದಲ್ಲಿ ಗುಂಪು ಗುಂಪಾಗಿ ರಸವನ್ನು ಹೀರುವುದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ನಂತರ ಒಣಗುತ್ತವೆ.
- ಎಲೆಯನ್ನು ಹಿಡಿದು ಗೀರಿದಾಗ ಕೆಳಭಾಗದಲ್ಲಿ ಕೆಂಪು ಬಣ್ಣ ಕೈಗೆ ಹತ್ತುತ್ತದೆ.
- ಬಾಧೆ ಅತಿಯಾದಾಗ ೫ ವರ್ಷದ ಮೇಲ್ಪಟ್ಟ ಗಿಡಗಳಲ್ಲಿಯೂ ಕಂಡು ಬರುತ್ತದೆ.
- ಕಾಯಿಗಳ ಮೇಲೆ ಕಪ್ಪು ಚುಕ್ಕೆಯಂತಾಗಿ ಕಾಯಿಗಳು ಉದುರುತ್ತವೆ.
- ಉದುರಿದ ಕಾಯಿಗಳ ತುಂಬು ತೆಗೆದು ನೋಡಿದಾಗ ಸಣ್ಣ ಕೆಂಪು ಬಣ್ಣದ ಹುಳುಗಳು ಕಾಣಿಸುತ್ತವೆ.
ಬಾಧೆ ಹೆಚ್ಚಾಗಲು ಕಾರಣಗಳು:
- ಬೇಸಿಗೆಯಲ್ಲಿ ಬಿಸಿಲಿನ ಬಾಧೆ ಹೆಚ್ಚು
- ಉಷ್ಣಾಂಶ ಮತ್ತು ಮಳೆಯ ಅಭಾವದಿಂದ ಹುಳುಗಳ ಸಂಖ್ಯೆ ಹೆಚ್ಚು
- ಸೂಕ್ತವಾದ ಅಂತರ ಬೆಳೆ ಬೆಳೆಯದಿರುವುದು
- ಬೇಸಿಗೆಯಲ್ಲಿ ಹೆಚ್ಚಿನ ಉಳುಮೆ ಮಾಡುವುದು
- ನೀರಿನ ಕೊರತೆ
- ಸೂಕ್ತ ನೀರಾವರಿ ಇಲ್ಲದ ಪ್ರದೇಶದಲ್ಲಿ ಅಡಿಕೆ ಬೆಳೆಯುವುದು
ನಿರ್ವಹಣೆ:
- ಬೇಸಿಗೆಯಲ್ಲಿ ಉಳುಮೆ ಮಾಡದಿರಿವುದು
- ಬೆಳೆಯ ಪ್ರಾಥಮಿಕ ಹಂತದಲ್ಲಿ ಸೂಕ್ತ ಅಂತರಬೆಳೆ ಬೆಳೆಯುವುದರಿಂದ (ಬಾಳೆ, ನುಗ್ಗೆ, ಪಪ್ಪಾಯ, ತೊಗರಿ ಇತರೆ)
- ಸಮಗ್ರ ಪೋಷಕಾಂಶ ನಿರ್ವಹಣೆ (ಸಾವಯವ ಮತ್ತು ರಾಸಾಯನಿಕ)
- ಉತ್ತಮ ನೀರಿನ ನಿರ್ವಹಣೆ, ನೀರಿನ ಪ್ರಮಾಣ ಸಾಕಷ್ಟು ಇದ್ದರೆ ತುಂತುರು ನೀರಾವರಿ ಅಳವಡಿಸಬೇಕು
- ನುಸಿ ನಾಶಕಗಳಾದ Dicofol 18.5 SC 2 ಮಿಲಿ ಅಥವಾ Propargite 57 EC 5 ಮಿಲಿ ಅಥವಾ Dimethoate 30 EC 1.7 ಮಿಲಿ ಲೀಟರ್‌ನಲ್ಲಿ ಬೆರಸಿ ಸಿಂಪಡಿಸಬೇಕು
- ಮಳೆ ಬಂದರೆ ಯಾವುದೇ ರಾಸಾಯನಿಕಗಳ ಬಳಕೆ ಅಗತ್ಯವಿರುವುದಿಲ್ಲ.