Connect with us

Dvgsuddi Kannada | online news portal | Kannada news online

ಮೇ. 3 ವರೆಗೆ ಲಾಕ್ ಡೌನ್ ವಿಸ್ತರಣೆ; ಏ.20 ವರೆಗೆ ನಿಯಮ ಕಠಿಣ : ಪ್ರಧಾನಿ ನರೇಂದ್ರ ಮೋದಿ

ಪ್ರಮುಖ ಸುದ್ದಿ

ಮೇ. 3 ವರೆಗೆ ಲಾಕ್ ಡೌನ್ ವಿಸ್ತರಣೆ; ಏ.20 ವರೆಗೆ ನಿಯಮ ಕಠಿಣ : ಪ್ರಧಾನಿ ನರೇಂದ್ರ ಮೋದಿ

ವದೆಹಲಿ:  ಮೇ .3 ವರೆಗೆ ದೇಶದಾದ್ಯಂತ ಲಾಕ್ ಡೌನ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಿಸಿದ್ದಾರೆ.

ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು,  ಕೊರೊನಾ ನಿಯಂತ್ರಿಸಲು ಲಾಕ್‍ಡೌನ್ ಅನಿವಾರ್ಯವಾಗಿದೆ. ಲಾಕ್‍ಡೌನ್ ಪಾಲನೆಯಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮತ್ತಷ್ಟು ನಿಯಂತ್ರಿಸಲು ಮೇ 3ರವರೆಗೆ ಲಾಕ್‍ಡೌನ್ ವಿಸ್ತರಿಸುತ್ತಿದ್ದೇನೆ ಎಂದರು.

bandhu

ಏ.20ರವರೆಗೆ ಎಲ್ಲಾ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಕಠಿಣ ನಿಯಮಗಳು ಜಾರಿಯಾಗಲಿದೆ. ಕೊರೊನಾ ಸಂಖ್ಯೆ ಕಡಿಮೆಯಾದರೆ ಏ.20ರ ಬಳಿಕ ಷರತ್ತುಗಳನ್ನು ಒಳಗೊಂಡು ಕೆಲವು ವಿನಾಯಿತಿ ಸಿಗಲಿದೆ ಎಂದು ಹೇಳಿದರು.

ಕೊರೊನಾ ವಿರುದ್ಧ ಹೇಗೆ ಹೋರಾಟ ನಡೆಸಬೇಕು. ಜನರ ಕಷ್ಟಗಳನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ  ಬಗ್ಗೆ ವಿವಿಧ  ರಾಜ್ಯಗಳ ಜೊತೆ  ಚರ್ಚೆ ಮಾಡಿದ್ದೇವೆ. ಎಲ್ಲ ರಾಜ್ಯಗಳು ಲಾಕ್ ಡೌನ್ ವಿಸ್ತರಿಸಲು ಸಲಹೆ ನೀಡಿವೆ. ಕೆಲ ರಾಜ್ಯಗಳು ಈಗಾಗಲೇ ವಿಸ್ತರಣೆ ಮಾಡಿವೆ ಎಂದು ತಿಳಿಸಿದರು.

ಹಾಟ್ ಸ್ಪಾಟ್ ಗಳ ಪ್ರದೇಶಗಳ ಗುರುತು

ಈ ಹಿಂದೆ 21 ದಿನ ನಿಯಮ ಪಾಲಿಸಿದಂತೆ ಮುಂದೆಯೂ ಪಾಲಿಸಬೇಕು. ಹೊಸ ಪ್ರದೇಶದಲ್ಲಿ ಸೋಂಕು ಹರಡದಂತೆ ನೋಡಿಕೊಳ್ಳಬೇಕಿದೆ. ಒಂದು ಸಾವು ನಮ್ಮ ಚಿಂತೆಯನ್ನ ಹೆಚ್ಚಿಸುತ್ತದೆ. ಮೊದಲಿಗಿಂತ ಹೆಚ್ಚು ನಿಯಮಗಳು ಹಾಟ್ ಸ್ಪಾಟ್ ಗಳಲ್ಲಿ ಹೆಚ್ಚಲಿದೆ. ಹೊಸ ಹಾಟ್ ಸ್ಪಾಟ್ ಗಳನ್ನು ಗುರುತಿಸಲಾಗುತ್ತದೆ. ದೇಶಾದ್ಯಂತ ಒಂದು ವಾರ ಡಬ್ಬಲ್ ಲಾಕ್‍ಡೌನ್ ಇರಲಿದೆ ಎಂದರು.

ಬೇರೆ ದೇಶಗಳನ್ನು ಹೋಲಿಸಿ ಕೊಂಡರೆ ಭಾರತ ಉತ್ತಮ ಸ್ಥಿತಿಯಲ್ಲಿದೆ. ನಾವು ಏನು ಮಾಡಿದ್ದೇವೆ ಅದು ಸರಿಯಾಗಿದೆ. ಭಾರತದೊಂದಿಗೆ ಸೋಂಕು ಕಾಣಿಸಿಕೊಂಡ ದೇಶಗಳಲ್ಲಿ ಶೇ.25-30 ಸೋಂಕು ಹೆಚ್ಚಾಗಿದೆ. ತುರ್ತು ನಿರ್ಧಾರ ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಏನಾಗುತಿತ್ತು ಎಂದು ಉಹಿಸಿದ್ರೆ ಭಯವಾಗುತ್ತದೆ ಎಂದು ಹೇಳಿದರು.

ವೈರಸ್ ಹರಡುವುದನ್ನು  ವಿರುದ್ಧದ ಹೋರಾಟದಲ್ಲಿ ನೀವೂ ಸಹ  ಭಾಗಿಯಾಗಿದ್ದೀರಿ. ಒಂದೇ ಒಂದು ಕೇಸ್ ಇಲ್ಲದ ವೇಳೆ ಕ್ರಮಗಳನ್ನು ಆರಂಭಿಸಿತ್ತು. ವೈರಸ್ ಹೆಚ್ಚಿದ್ದ ದೇಶಗಳಿಗೆ ವಿಮಾನ ಸೇವೆಯನ್ನು ರದ್ದು ಮಾಡಿತ್ತು. ಆರಂಭದಲ್ಲೇ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಕೆಲಸ ಆರಂಭಿಸಿ, ವಿದೇಶದಿಂದ ಬಂದವರು ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ಸೂಚಿಸಿದ್ದೆವು. 550 ಕೇಸ್ ಗಳು ಇದ್ದಾಗ 21 ದಿನಗಳ ಲಾಕ್ ಡೌನ್ ನಿರ್ಧಾರ ಮಾಡಿತು. ಸಮಸ್ಯೆ ಉಲ್ಬಣವಾಗುವರೆಗೂ ನಾವು ಕಾಯಲಿಲ್ಲ. ತಕ್ಷಣವೇ ನಿರ್ಧಾರ ತೆಗೆದುಕೊಂಡು ಕೊರೊನಾ ನಿಯಂತ್ರಣ ಮಾಡಿದ್ದೇವೆ. ಮುಂದೆಯೂ ಕೊರೊನಾ ತಡೆಯಲು ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top