ಜಮ್ಮು : ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ತಗೆದು ಹಾಕಿದ್ದರ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಇಂಟರ್ ನೆಟ್ ಸೇರಿದಂತೆ ಸಂವಹನ ಸಂಪರ್ಕ ಕಡಿತಗೊಳಿಸಲಾಗಿತ್ತು. ಇದೀಗ ಪ್ರೀಪೇಯ್ಡ್ ಮೊಬೈಲ್ ಸೇವೆ ಪುನರ್ ಆರಂಭಿಸಲಾಗಿದೆ. ನಿರ್ಬಂಧ ವಿಧಿಸಿದ್ದ ಐದು ತಿಂಗಳ ನಂತರ ಮೊಬೈಲ್ ಫೋನ್ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರೀಪೇಯ್ಡ್ ಮೊಬೈಲ್ ಫೋನ್ ಕರೆ ಹಾಗೂ ಎಸ್‌ಎಂಎಸ್ ಸೇವೆಗೆ . ಜೊತೆಗೆ ಎರಡು ಜಿಲ್ಲೆಗಳಲ್ಲಿ 2ಜಿ ಇಂಟರ್‌ನೆಟ್ ಸೇವೆಯನ್ನೂ ಒದಗಿಸಲಾಗಿದೆ . ನಿರ್ಧಿಷ್ಟ ಸಿಮ್‌ಗೆ ಮೊಬೈಲ್ ಇಂಟರ್‌ನೆಟ್ ಸೇವೆ ಒದಗಿಸುವುದನ್ನು ಪರಿಶೀಲಿಸಿ ನೀಡಲಾಗುತ್ತಿದೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿಯಾದ ಆಗಸ್ಟ್ 4ರಿಂದ ಕೇಂದ್ರ ಸರ್ಕಾರ ಹಲವು ನಿರ್ಬಂಧ ಹೇರಿತ್ತು.



