ಡಿವಿಜಿ ಸುದ್ದಿ, ದಾವಣಗೆರೆ: ಎಸ್.ವಿ.ಟಿ ಫೀಡರ್‍ನಲ್ಲಿ ತುರ್ತು ಕಾರ್ಯ ಹಮ್ಮಿಕೊಂಡಿರುವುದರಿಂದ ಡಿ.28 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಎಸ್.ವಿ.ಟಿ ಫೀಡರ್ ವ್ಯಾಪ್ತಿಯ ಡೆಂಟಲ್ ಕಾಲೇಜ್ ರಸ್ತೆ, ಎಮ್.ಸಿ.ಸಿ.ಬಿ. ಬಿ ಬ್ಲಾಕ್, ಆಂಜನೇಯ ಬಡಾವಣೆ, ಮಾಮಾಸ್ ಜಾಯಿಂಟ್ ರಸ್ತೆ ಸುತ್ತ ಮುತ್ತ ಪ್ರದೇಶಗಳು, ಶ್ರೀನಿವಾಸನಗರ 1ನೇ ಕ್ರಾಸ್ ನಿಂದ 6ನೇ ಕ್ರಾಸ್ ವರೆಗೆ, ಆದಾಯ ತೆರಿಗೆ ಕಛೇರಿ, ಅನುಭವ ಮಂಟಪ ಶಾಲೆ, ನೀರಾವರಿ ಇಲಾಖೆ, ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.
ವಿವೇಕಾನಂದ ಫೀಡರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 12 ರಿಂದ 2 ಗಂಟೆಯವರೆಗೆ ವಿನಾಯಕ ಬಡಾವಣೆ , ನೂತನ್ ಕಾಲೇಜು, ವಿವೇಕಾನಂದ ಬಡಾವಣೆ, ಆಂಜನೇಯ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಡಿ29 ರಂದು ಎಸ್.ಆರ್.ಎಸ್ ದಾವಣಗೆರೆಯಿಂದ ಹೊರಡುವ ವಾಟರ್ ವಕ್ರ್ಸ್ ಫೀಡರ್‍ನಲ್ಲಿ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 05-00 ಗಂಟೆಯ ವರೆಗೆ ಸರ್ಕ್ಯೂಟ್ ಹೌಸ್, ವಾಟರ್ ವರ್ಕ್ಸ್, ದೂರದರ್ಶನ ಕೇಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



