ಡಿವಿಜಿ ಸುದ್ದಿ, ದಾವಣಗೆರೆ: ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಸಭಾಧ್ಯಕ್ಷರನ್ನು ಗೌರವಿಸದೆ ಏಕ ವಚನದಲ್ಲಿ ಮಾತನಾಡುವ ಮೂಲಕ ಅಗೌರವ ತೋರಿದ್ದಾರೆ. ಈ ಕೂಡಲೇ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು ಎಂದು ಸಚಿವ ಕೆ.ಎಸ್ . ಈಶ್ವರಪ್ಪ ಆಗ್ರಹಿಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ರಮೇಶ್ ಕುಮಾರ್ ಸಭಾಧ್ಯಕ್ಷರಾಗಿದ್ದಾಗ ಒಬ್ಬರನ್ನೊಬ್ಬರು ಹೊಗಳುತ್ತಿದ್ದರು.ರಮೇಶ್ ಕುಮಾರ್‌ರನ್ನು ಅಂಬೇಡ್ಕರ್ ಎನ್ನುತ್ತಿದ್ದರು, ಅವರು ಸಿದ್ದರಾಮಯ್ಯ ರನ್ನು ದೇವರಾಜ್ ಅರಸ್ ಎಂದು ಹೊಗಳುತ್ತಿದ್ದರು. ಆದರೆ, ಈಗ ಸಭಾಧ್ಯಕ್ಷರ ವಿರುದ್ಧ ಏಕ ವಚನ ದಲ್ಲಿ ಮಾತನಾಡುವ ಮೂಲಕ ಅಗೌರವ ತೋರಿದ್ದಾರೆ ಎಂದರು.
ಡಿಕೆಶಿ ಪ್ರಕರಣ ರಾಜಕೀಯಕ್ಕೆ ಬಳಸಲ್ಲ
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿಚಾರವನ್ನು ನಾವು ರಾಜಕೀಯವಾಗಿ ಬಳಸಿಕೊಳ್ಳುವುದಿಲ್ಲ. ಕುಟುಂಬದವರು ಕಣ್ಣೀರು ಹಾಕುತ್ತಿರುವುದು ಮಾಧ್ಯಮಗಳಲ್ಲಿ ನೋಡಿದ್ದೇವೆ. ದೇವರು ಅವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದರು.



