ಡಿವಿಜಿ ಸುದ್ದಿ, ಬೆಂಗಳೂರು: ವೈದ್ಯಕೀಯ ಉಪಕರಣ ಖರೀದಿಯಲ್ಲಿ ಸರ್ಕಾರ ಭ್ರಷ್ಟಚಾರ ನಡೆಸಿದೆ ಎಂದು ಪ್ರತಿಪಕ್ಷಗಳ ಆರೋಪ ಬೆಟ್ಟ ಅಗೆದು ಇಲಿ ಹುಡುಕುವ ಪ್ರಯತ್ನ ಎಂದು ಬಿಜೆಪಿ ಯುವ ಮುಖಂಡ ಬಿ.ವೈ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕರ ಆರೋಪಗಳಿಗೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ವಿಜಯೇಂದ್ರ, ಆರೋಪ ಮಾಡಲೇಬೇಕು ಎನ್ನುವ ಹತಾಶೆಯಿಂದ ಆರೋಪ ಮಾಡಲು ಹೋಗಿ ಆರೋಪಿತರಾಗುವ ಸ್ಥಿತಿ ಕಾಂಗ್ರೆಸ್ ನಾಯಕರದ್ದಾಗುತ್ತಿದೆ. ನಿಮ್ಮ ಆಂತರಿಕ ಪೈಪೋಟಿಗಾಗಿ ಬೆಟ್ಟೆ ಅಗೆದು ಇಲಿ ಹುಡುಕಲು ಪ್ರಯತ್ನಿಸುವ ಬದಲು, ಸವಾಲಿನ ಕಾಲದಲ್ಲಿ ಸರ್ಕಾರಕ್ಕೆ ರಚನಾತ್ಮಕಸಲಹೆ ನೀಡಿ, ಜನರ ಸಂಕಷ್ಟದಲ್ಲಿ ಭಾಗಿಯಾಗಿ ಎಂದು ಹೇಳಿದ್ದಾರೆ.

ಕೋವಿಡ್ ಕಿಟ್ ಖರೀದಿಯಲ್ಲಿ 2 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮ್ಯಯ ಆರೋಪಿಸಿದ್ದರು. ಸರ್ಕಾರ ಕೊರೊನಾ ನೆಪದಲ್ಲಿ 4,167 ಕೋಟಿ ರೂ. ಖುರ್ಚು ಮಾಡಿದೆ. ಆದರೆ ಬಿಜೆಪಿ ಸಚಿವರು ಮಾತ್ರ 327 ರೂ. ಮಾತ್ರ ವೆಚ್ಚ ಮಾಡಿರುವುದಾಗಿ ಹೇಳುತ್ತಿದ್ದಾರೆ. ವೆಂಟಿಲೇಟರ್ ಖರೀದಿಯಲ್ಲೂ ಅಕ್ರಮ ನಡೆದಿದ್ದು, ಫುಡ್ ಕಿಟ್, ಪಿಪಿಇ ಕಿಟ್, ಮಾಸ್ಕ್ ಖರೀದಿ ಹೆಸರಿನಲ್ಲೂ ಹಣ ಲೂಟಿ ಮಾಡಿದ್ದಾರೆ ಎಂದಿದ್ದರು.



