ಡಿವಿಜಿ ಸುದ್ದಿ, ಬಾಗಲಕೋಟೆ: ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ದಿಂದ ಹಣಕಾಸಿನ ನೆರವು ನೀಡದೆ. ಯಡಿಯೂರಪ್ಪ ಸಂಕಷ್ಟಕ್ಕೆ ಸಿಲುಕಿಸಿ ಬೀದಿಗೆ ತಳ್ಳುವ ಸಂಚು ರೂಪಿಸಲಾಗಿದೆ ಎಂದು ಕೇಂದ್ರ ಮಾಜಿ ಸಚಿವ ವೀರಪ್ಪ ಮೊಯ್ಲಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ಬಾರಿ ನೆರೆಯಾಗಿದೆ. ಕೇಂದ್ರ ಸರ್ಕಾರ ಒಮ್ಮೆ 1,200 ಕೋಟಿ ಬಿಡುಗಡೆ ಮಾಡಿದೆ. ಅದೂ ಕೂಡ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ ಎಂದು ಟೀಕಿಸಿದರು
ನೆರೆ ಪರಿಹಾರ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಿತಿ ಕರುಣಾಜನಕವಾಗಿದೆ. ರಾಜ್ಯದ ಬೊಕ್ಕಸ ಖಾಲಿಯಾಗಿದ್ದು, ಅವರಾದರೂ ಹಣ ಎಲ್ಲಿಂದ ಹಣ ತರ್ತಾರೆ . ಕೇಂದ್ರ ನಾಯಕರು ಭೇಟಿಗೂ ಅವಕಾಶ ನೀಡುತ್ತಿಲ್ಲ. ಹೀಗಾಗಿ ಯಡಿಯೂರಪ್ಪ ಪರಿಸ್ಥಿತಿ ಹುಚ್ಚರಂತಾಗಿದೆ. ಕೇಂದ್ರದ ಬಿಜೆಪಿ ನಾಯಕರಿಗೂ ಅದೇ ಬೇಕಿದ್ದು, ಯಡಿಯೂರಪ್ಪ ಅವರನ್ನು ಬೀದಿಗೆ ತಳ್ಳೋ ಸಂಚು ನಡೆಯುತ್ತಿದೆ‘ ಎಂದರು.
, ಪ್ರಧಾನಿ ನರೇಂದ್ರಮೋದಿ, ಅಮಿತ್ ಷಾ ಅವರು ಯಡಿಯೂರಪ್ಪ ಮಾತು ಕೇಳುತ್ತಿಲ್ಲ. ಇತ್ತ ಸರ್ಕಾರದ ಬಳಿಯೂ ಹಣ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಿಯಾದರೂ ಕದ್ದು, ದರೋಡೆ ಮಾಡಿಯಾದರೂ ಪರಿಹಾರ ಕೊಡಲಿ ಎಂದರು.
.



