ಡಿವಿಜಿ ಸುದ್ದಿ, ಕೊಪ್ಪಳ: ಪೌರತ್ವ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ನಾನು ಕಾರಣವಲ್ಲ. ಜನರ ಭಾವನೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ. ನೆರೆಯ ರಾಜ್ಯದಲ್ಲಿ ಆಗ್ತಿರೋ ಪ್ರತಿಭಟನೆಯನ್ನು ನೋಡಿ ನಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ನಾನು ಕರ್ನಾಟಕ ಹೊತ್ತಿ ಉರಿಯುತ್ತೆ ಎಂದು ಹೇಳಿಲ್ಲ. ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ. ಬೇರೆ ರಾಜ್ಯದ ಪ್ರತಿಭಟನೆ ಗಮನಿಸಿ ನಾನು ಮಾತಾಡಿದ್ದೇನೆ. ಕಾಯ್ದೆ ಜಾರಿಯಾದ್ರೆ ಬೇರೆ ರಾಜ್ಯದ ಪರಸ್ಥಿತಿ ಇಲ್ಲಿ ಆಗಬಹುದು ಎಂದಿದ್ದೇನೆ ಅಷ್ಟೇ. ರಾಜ್ಯದಲ್ಲಿ ಪ್ರತಿಭಟನೆ ನಡೆಯಲು ಮಾಜಿ ಸಚಿವ ಯು.ಟಿ ಖಾದರ್ ಕಾರಣ ಎಂದು ಕಿಡಿಕಾರಿದ್ದರು.



