ಡಿವಿಜಿ ಸುದ್ದಿ, ದಾವಣಗೆರೆ: ನನಗೂ ಡಿಸಿಎಂ ಆಗುವ ಆಸೆ ಇದೆ. ಆದರೆ, ಒತ್ತಡದಲ್ಲಿರುವ ಮುಖ್ಯಮಂತ್ರಿಯನ್ನು ಮುಜುಗರ ಮಾಡಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದರು.
ಹರಿಹರದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆ ಆಗಮಿಸಿದ ಅವರು ಸುದ್ದಿಗಾರೊಂದಿಗೆ ಮಾತನಾಡಿ, ಮುಖ್ಯಮಂತ್ರಿಗಳು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಒತ್ತಡದಲ್ಲಿರುವ ಮುಖ್ಯಮಂತ್ರಿಯನ್ನು ಮುಜುಗರ ತರುವ ಕೆಲಸ ಮಾಡಲ್ಲ.ಡಿಸಿಎಂ ಆಗುವ ಅವಕಾಶ ಮುಂದೆ ಬರುತ್ತದೆ. ವಾಲ್ಮೀಕಿ ಸಮಾಜಕ್ಕೆ ಯಡಿಯೂರಪ್ಪನವರ ಅವಕಾಶ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ. ಯಡಿಯೂರಪ್ಪ ಕೊಟ್ಟ ಮಾತು ಯಾವತ್ತು ತಪ್ಪುವುದಿಲ್ಲ ಎಂದರು.
ಮೀಸಲಾತಿ ವಿಚಾರದಲ್ಲಿ ನಮ್ಮ ಸಮಾಜಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ. ಸೋಮವಾರ ಬಜೆಟ್ ಪೂರ್ವ ಸಭೆ ಇದ್ದು, ಸಭೆಯಲ್ಲಿ ನಮ್ಮ ಸಲಹಗೆಳನ್ನು ನಾವು ಕೊಡುತ್ತೇವೆ ಎಂದ ಅವರು, ಬಳ್ಳಾರಿ ಉಸ್ತುವಾರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲಿಲ್ಲ.



