ಡಿವಿಜಿ ಸುದ್ದಿ, ಬೆಂಗಳೂರು: ನೆರೆ ಪರಿಹಾರ ವಿಚಾರವಾಗಿ ಕೇಂದ್ರ, ರಾಜ್ಯ ಸರ್ಕಾರವನ್ನು ತರಾಟೆ ತಗೆದುಕೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜಪಿ ಸರ್ಕಾಕ್ಕೆ ಕಣ್ಣು, ಕಿವಿ, ಹೃದಯ ಏನಾದ್ರೂ ಇದೆಯಾ ಅಂತಾ ಟ್ವಿಟ್ ಮೂಲಕ ಕುಟುಕಿದ್ದಾರೆ.
ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡದಿದ್ದರೆ, ಮುಂದಿನ ಚುನಾವಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಉಳಿಗಾಲವಿಲ್ಲ. ನೆರೆ ಪರಿಹಾರ ವಿಳಂಬ ಕುರಿತು ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇದೆಯೇ? ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣೆ ಸಮಯದಲ್ಲಿ, ದಿನದಲ್ಲಿ ಮೂರು ಪ್ರದೇಶಗಳಿಗೆ ಹೋಗಲು ಸಾಧ್ಯವಿದೆ. ಆದರೆ ರಾಜ್ಯದಲ್ಲಿ ನೆರೆ ಸಂಬವಿಸಿ 45 ದಿನ ಕಳೆದರೂ, ಒಂದು ಪ್ರದೇಶಕ್ಕೂ ಭೇಟಿ ನೀಡಲಾಗಿಲ್ಲ. ಮಿಸ್ಟರ್ ಮೋದಿ, ಮುಂದಿನ ಚುನಾವಣೆವರೆಗೂ ಕಾದುನೋಡಿ, ಇದೇ ರೀತಿ ಮುಂದುವರಿದರೆ ನಿಮ್ಮ ಮೆರವಣಿಗೆ ಯಾರು ಬರುವುದಿಲ್ಲ ವಾಗ್ದಾಳಿ ನಡೆಸಿದ್ದಾರೆ.
ನಾನು, ನೆರೆ ಸಂತ್ರಸ್ತರಿಗೆ ಅನುದಾನ ಬಿಡುಗಡೆ ಮಾಡದಿರುವ ಕೇಂದ್ರ ಸರ್ಕಾರವನ್ನು ಟೀಕಿಸಿದರೆ, ರಾಜ್ಯದ ಬಿಜೆಪಿ ನಾಯಕರು ನನ್ನ ಮೇಲೆ ತಿರುಗಿ ಮಾತನಾಡುತ್ತಾರೆ. ಅವರೇನು ಮಾನವೀಯತೆಯನ್ನೇ ಕಳೆದುಕೊಂಡಿದ್ದಾರಾ? ಕೇಂದ್ರ ಸರ್ಕಾರ ಟೀಕಿಸಿದರೆ, ರಾಜ್ಯ ನಾಯಕರಿಗೆ ಯಾಕಿಷ್ಟು ಸಿಟ್ಟು..? ನೆರೆಸಂತ್ರಸ್ತರಿಗೆ ಪರಿಹಾರ ದೊರಕುವವರೆಗೂ ನಾನು ಮತ್ತಷ್ಟು ಗುಂಡುಗಳನ್ನು ಹಾರಿಸುತ್ತಲೇ ಇರುತ್ತೇನೆ. ಸಂತ್ರಸ್ತರು ಆರೋಗ್ಯ, ಮನೆ, ಆಹಾರ ಇಲ್ಲದೆ ಪರಿತಪಿಸುತ್ತಿದ್ದಾರೆ. ಆದರೆ, ಈ ಸರ್ಕಾಕ್ಕೆ ಈ ಸ್ಥಿತಿ ಕಾಣುತ್ತಿಲ್ಲವೇ ಎಂದು ಅಣಕಿಸಿದ್ದಾರೆ.



