ಡಿವಿಜಿ ಸುದ್ದಿ, ಬೆಂಗಳೂರು: ಯಡಿಯೂರಪ್ಪ ನೀವು ಇನ್ನು ಎಷ್ಟು ದಿನ ರಾಜ್ಯದಲ್ಲಿ ಅಧಿಕಾರದಲ್ಲಿ ಇರ್ತಿರಿ ಅನ್ನೋದು ಗೊತ್ತಿಲ್ಲ. ನೀವು ಜನರನ್ನು ಎದುರಿಸಿ ಕಾನೂನು ರೂಪಿಸಬಹುದು ಎನ್ನುವ ಭ್ರಮೆಯಲ್ಲಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.
ಶಾಹೀನ ಶಾಲೆ ವಿರುದ್ಧ ದೇಶ ದ್ರೋಹ ಕೇಸ್ ದಾಖಲಿಸಿದ್ದನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ಸಿಎಂ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನಿಗೆ ಭಂಗ ತರುವಂತಹ ಪ್ರಯತ್ನ ನಡೆಯುತ್ತಿದೆ.

ರಾಜ್ಯದಲ್ಲಿ ಕಾನೂನು ಪಾಲನೆಯಾಗುತ್ತಿಲ್ಲ. ಯಡಿಯೂರಪ್ಪ ನೀವು ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರ್ತಿರಿ ಅನ್ನೋದು ಗೊತ್ತಿಲ್ಲ.ನೀವು ಜನರನ್ನು ಎದುರಿಸಿ ಕಾನೂರು ರೂಪಿಸಿಕೊಳ್ಳಬಹುದು ಎಂಬ ಭ್ರಮೆಯಲ್ಲಿದ್ದೀರಿ. ಸಿಎಎ ಕಾಯ್ದೆಯನ್ನು ವಿರೋಧಿಸಿದವರ ಮೇಲೆ ದೇಶದ್ರೋಹ ಆರೋಪದ ಕೇಸ್ ದಾಖಲಿಸಲಾಗುತ್ತಿದೆ ಎಂದು ಕಿಡಿಕಾರಿದರು.



