ಡಿವಿಜಿ ಸುದ್ದಿ, ಹಿರೇಕೆರೂರು: ನಾನು ಜೆಡಿಎಸ್ ಬಿಡಲಿಲ್ಲ. ನನ್ನನ್ನ ದೇವೇಗೌಡರು ಪಕ್ಷದಿಂದ ಉಚ್ಛಾಟನೆ ಮಾಡಿದ್ರು ಮಿಸ್ಟರ್ ಬಿ.ಸಿ.ಪಾಟೀಲ ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಕೂಡ ಜೆಡಿಎಸ್ ನಿಂದ ಪಕ್ಷಾಂತರ ಮಾಡಿ ಕಾಂಗ್ರೆಸ್ ಗೆ ಬಂದಿದ್ದಾರೆ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್ ಹೇಳಿಕೆಗೆ ಪ್ರತ್ಯುತ್ತರ ನೀಡಿದರು. ಹಿರೇಕೆರೂರಲ್ಲ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್ . ಬನ್ನಿಕೋಡ ಮತಯಾಚನೆ ವೇಳೆ ಸಿದ್ದರಾಮಯ್ಯ ಮಾತನಾಡಿದರು.
ನನ್ನನ್ನು ಜೆಡಿಎಸ್ ನಲ್ಲಿ ಉಪ ಮುಖ್ಯಮಂತ್ರಿ ಸ್ಥಾನದಿಂದ ಡಿಸ್ ಮಿಸ್ ಮಾಡಿದ್ರು. ನೀವು ಬಿಜೆಪಿಗೆ ಹೋಗಿದ್ದಕ್ಕೆ, ನನ್ನನ್ನ ಜೆಡಿಎಸ್ ನಿಂದ ಉಚ್ಛಾಟಿಸಿದ್ದಕ್ಕೆ ಏನಾದ್ರೂ ಸಂಬಂಧ ಇದೆಯಾ ಪಾಟೀಲ. ರಾಜಕಾರಣ ಅಂದ್ರೆ ಪೊಲೀಸ್ ಕೆಲಸ ಅಂತಾ ತಿಳಿದುಕೊಂಡಿದ್ದೀಯಾ..? ಇನ್ನೂ ಪೊಲೀಸ್ ಬುದ್ಧಿ ಹೋಗಿಲ್ಲ. ಪೊಲೀಸ್ ಇಲಾಖೆಯಲ್ಲಿಯೂ ಒಳ್ಳೆಯವರಿದ್ದಾರೆ. ಪಾಟೀಲ ಒಳ್ಳೆಯವನಲ್ಲ ಎಂದು ಕಿಡಿಕಾರಿದರು.