ಡಿವಿಜಿ ಸುದ್ದಿ, ಕೊಡಗು: ದೇಶದ್ರೋಹಿಗಳ ಗಡಿಪಾರು ಮಾಡದಿದ್ದಲ್ಲಿ ದೇಶಕ್ಕೆ ಗಂಡಾಂತರ ಎದುರಾಗಲಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ದೇಶದ್ರೋಹದ ಹೇಳಿಕೆಗಳು ಹೆಚ್ಚಾಗುತ್ತಿವೆ. ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವ ದೇಶದ್ರೋಹಿಗಳಿಗೆ ಕಂಡಲ್ಲಿ ಗುಂಡಿಕ್ಕಬೇಕು ಎಂದರು.
ಭಾರತದಲ್ಲಿ ನೆಲೆ ನಿಂತು ಪರದೇಶಕ್ಕೆ ಜೈ ಎನ್ನುವರು ದೇಶದ್ರೋಹಿಗಳು. ಈ ದೇಶದ ನೀರು, ಗಾಳಿ, ಆಹಾರ ಬೇಕು. ಆದರೆ, ಪಾಕಿಸ್ತಾನಕ್ಕೆ ನಿಷ್ಠೆ ತೋರಿಸುವುದು ಎಷ್ಟು ಸರಿ ಎಂದು ಕಿಡಿಕಾರಿದರು.ದೇಶಕ್ಕೆ ಅಗೌರವ ತೋರಿಸಿ, ಪಾಕಿಸ್ತಾನದ ಬಗ್ಗೆ ಪ್ರೀತಿ ತೋರಿಸುವವರು ಅಲ್ಲಿಯೇ ಹೋಗಿ ನೆಲೆಸಲಿ ಎಂದರು.
.



