ಡಿವಿಜಿ ಸುದ್ದಿ, ತುಮಕೂರು: ಶಿರಾ ಉಪ ಚುನಾವಣೆಯಲ್ಲಿ ನನಗೆ ಟೆಕೆಟ್ ಕೊಡುವ ವಿಚಾರದಲ್ಲಿ ರಾಜ್ಯದ ಮುಖಂಡರು ಯಾವ ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ. ಆದರೆ, ನನಗೆ ಟಿಕೆಟ್ ಕೊಟ್ಟರೆ ಸಾಲದು, ಪಕ್ಷದಿಂದ ದುಡ್ಡು ಕೂಡ ಕೊಡಬೇಕು. ದುಡ್ಡು ಇಲ್ಲದೇ ಟಿಕೆಟ್ ತಗೊಂಡು ಏನ್ ಮಾಡಲಿ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಎಂದು ಹೇಳಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವೇ ನಮಗೆ ದುಡ್ಡುಕೊಡಬೇಕು. ಇದೇನು ದೇವೇಗೌಡರ ಪಕ್ಷನಾ..? ದುಡ್ಡು ಕೊಟ್ಟು ಬಿ-ಫಾರ್ಮ್ ಇಸ್ಕೊಂಡು ಬರೋಕೆ. ಇದು ಕಾಂಗ್ರೆಸ್ ಪಕ್ಷ. ಇಲ್ಲಿ ಟಿಕೆಟ್ ಕೊಟ್ಟ ಹಣವನ್ನು ಕೊಡಲಾಗುತ್ತದೆ.
ದೇವೇಗೌಡರ ಪಕ್ಷದಲ್ಲಿ ಟಿಕೆಟ್ ಪಡೆಯಲೂ ಅಭ್ಯರ್ಥಿಗಳು ದುಡ್ಡು ಕೊಡಬೇಕು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೊಟ್ಟು ಪಕ್ಷವೇ ಅಭ್ಯರ್ಥಿಗಳಿಗೆ ಹಣ ಕೊಡುತ್ತದೆ ಎಂದು ತಿಳಿಸಿದರು.



