ಡಿವಿಜಿ ಸುದ್ದಿ, ಬೆಂಗಳೂರು: ಉಪ ಚುನಾವಣೆ ನೈತಿಕ ಹೊಣೆ ಹೊತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸಚಿವ ಆರ್ ಅಶೋಕ್ ಆಗ್ರಹಿಸಿದರು.
ಈ ಬಗ್ಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಇದರ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕು. ಮುಂದಿನ ದಿನಗಳಲ್ಲಿ ಅವರ ಪಕ್ಷದಲ್ಲಿಯೇ ಅವರನ್ನು ಕೆಳಗಿಳಿಸುವ ದೊಡ್ಡ ಪರ್ವವೇ ಆರಂಭವಾಗುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಉಪಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಬಿಜೆಪಿಗೆ 12 ಸೀಟುಗಳಲ್ಲಿ ಮುನ್ನೆಡೆ ಲಭಿಸಿದೆ. ಕಾಂಗ್ರೆಸ್ಸಿಗೆ 2 ಸೀಟು ಅಂತ ಹೇಳಲಾಗುತ್ತಿದ್ದು, ಅದೂ ಸಿಗೋದು ಡೌಟು. ಇದೇ ವೇಳೆ ಜೆಡಿಎಸ್ ಕರ್ನಾಟಕ ಭೂಪಟದಲ್ಲಿ ಕಾಣೆಯಾಗುತ್ತಿದೆ ಎಂದು ಹೇಳಿದರು.



