ಡಿವಿಜಿ ಸುದ್ದಿ, ಹಾಸನ: ನಾನೀನ್ನು ಕಿರಿಯ, ನನ್ನ ಬದಲು ಪಕ್ಷದಲ್ಲಿ ನನಗಿಂತ ಹಿರಿಯರಿಗೆ ನಿಗಮಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ನಾನು ನಿಗಮ ಮಂಡಳಿ ಆಕಾಂಕ್ಷಿ ಆಗಿರಲಿಲ್ಲ. ಅರಣ್ಯ ವಸತಿ ಮತ್ತು ವಿಹಾರಧಾಮ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ನನಗೆ ಗೊತ್ತಿರಲಿಲ್ಲ. ಈ ಸ್ಥಾನ ನೀಡಿದ್ದಕ್ಕೆ ಸಿಎಂಗೆ ಧನ್ಯವಾದ ತಿಳಿಸುತ್ತೇನೆ.ನನ್ನ ಬದಲು ಬೇರೆ ಆಕಾಂಕ್ಷಿ ಅಥವಾ ಹಿರಿಯರಿಗೆ ಈ ಸ್ಥಾನ ನೀಡಲಿ ಎಂದಿದ್ದಾರೆ.
ನಾನು ಯಡಿಯೂರಪ್ಪನವರ ಅಪ್ಪಟ ಅಭಿಮಾನಿ. ನಾನು ಮೊದಲ ಬಾರಿಗೆದ್ದವನು, ನನಗೆ ನಿಗಮ ಮಂಡಳಿ ಅಧ್ಯಕ್ಷನಾಗುವ ಆಸೆ ಇಲ್ಲ. ಮಂತ್ರಿ ಸ್ಥಾನ ಬೇಕಾದರೆ ನಾನು ನೇರವಾಗಿ ಕೇಳ್ತಿನಿ, ಸುತ್ತಿ ಬಳಸಿ ಕೇಳಲ್ಲ. ಸೂಕ್ತ ಸಮಯದಲ್ಲಿ ನಮ್ಮ ಕೆಲಸ ಗುರುತಿಸಿ ಕೊಡುತ್ತದೆ. ಇನ್ನು ನನಗೆ ಕಾಲವಕಾಶವಿದೆ ಎಂದು ತಿಳಿಸಿದ್ದಾರೆ.
ಕಾರ್ಯಕರ್ತನನ್ನಾಗಿ ಕೆಲಸ ಮಾಡುತ್ತಿದ್ದವನನ್ನ ಶಾಸಕನನ್ನಾಗಿ ಮಾಡಿದ್ದು ಯಡಿಯೂರಪ್ಪ. ನಾನು ಯಡಿಯೂರಪ್ಪ ಹಾಕಿದ ಗೆರೆ ದಾಟಲ್ಲ. ಸರ್ಕಾರ ಇನ್ನೂ ಮೂರು ವರ್ಷ ಸುಭದ್ರವಾಗಿರಬೇಕು. ನನಗಿನ್ನೂ 38-39 ವರ್ಷ ವಯಸ್ಸಾಗಿದ್ದು, ಇನ್ನು ಬಹಳಷ್ಟು ಕಾಲ ರಾಜಕೀಯದಲ್ಲಿ ಇರಬೇಕು ಎಂದುಕೊಂಡಿದ್ದೇನೆ ಎಂದರು.



