ಚೆನ್ನೈ: ದೇಶದಲ್ಲಿ ಯುವಕರ ಪ್ರಶ್ನೆ ಕೇಳುವ ಮಾನೋಭಾವ ಹತ್ತಿಕ್ಕುವುದೆಂದರೆ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದರ್ಥ ಎಂದು ನಟ,ರಾಜಕಾರಣಿ ಕಮಲ ಹಾಸನ್ ಹೇಳಿದ್ದಾರೆ.
ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಪ್ರತಿಕ್ರಿಯಿಸಿದ ಅವರು, ಯುವಕರಲ್ಲಿ ರಾಜಕೀಯ ಅರಿವು ಹೆಚ್ಚಾಗಿದೆ. ಹೀಗಾಗಿ ಅವರು ಪ್ರಶ್ನಿಸುತ್ತಾರೆ. ಇಂತಹ ಪ್ರಶ್ನೆಗಳನ್ನೇ ಹತ್ತಿಕ್ಕಲಾಗುತ್ತಿದೆ ಎಂದರೆ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದರ್ಥ ಎಂದರು.
ನಾನೂ ಒಬ್ಬ ವಿದ್ಯಾರ್ಥಿ. ವಿದ್ಯಾರ್ಥಿಗಳ ಪರ ದನಿಯೆತ್ತುವುದನ್ನು ಮುಂದುವರಿಸುತ್ತೇನೆ. ಪೌರತ್ವ ಮಸೂದೆ ವಿರುದ್ಧದ ಕಾನೂನು ಹೋರಾಟ ನಡೆಯಲಿದೆ ಎಂದು ತಿಳಿಸಿದರು