ಡಿವಿಜಿ ಸುದ್ದಿ, ಹೊಸಕೋಟೆ: ದಿನ ಕಳೆದಂತೆ ಉಪ ಚುನಾವಣೆ ಕಣ ರಂಗೇರುತ್ತಿದ್ದು, ಹೊಸಕೋಟೆ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳು ತೀವ್ರ ಕುತೂಹಲ ಮೂಡಿಸಿವೆ. ಒಂದು ಟಿಕೆಟ್ ಎರಡು ಕ್ಷೇತ್ರದ ರಣತಂತ್ರ ಎನ್ನುವಂತಾಗಿದೆ.
ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಚಿಕ್ಕಬಳ್ಳಾಪುರ ಬಿಜೆಪಿ ಸಂಸದರಾಗಿರುವ ಬಿ.ಎನ್. ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಸ್ಪರ್ಧೆ ಮಾಡಿದ್ದಾರೆ. ಇದು ಬಿಜೆಪಿ ನಾಯಕರಿಗೆ ತಲೆ ನೋವಾಗಿದೆ. ಇನ್ನೊಂದೆಡೆ ನಾಮಪತ್ರ ವಾಪಸ್ಸು ಪಡೆಯುವಂತೆ ಮುಖ್ಯಮಂತ್ರಿ ಆದೇಶ ಮಾಡಿದ್ದರೂ, ಬಚ್ಚೇಗೌಡ ಪುತ್ರ ನಾಮಪತ್ರ ವಾಪಸ್ಸು ಪಡೆದಿಲ್ಲ. ನಾಳೆ ಒಳಗೆ ನಾಮಪತ್ರ ವಾಪಸ್ಸು ಪಡೆಯದಿದ್ದರೆ, ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು ಎಂದು ಸೂಚನೆ ನೀಡಲಾಗಿದೆ. ಆದರೆ, ಇದಕ್ಕೂ ಬಗ್ಗೆ ಬಚ್ಚೇಗೌಡ ಸಂಸದ ಸ್ಥಾನನಕ್ಕೂ ರಾಜೀನಾಮೆ ನೀಡುವ ಸೂಚನೆ ನೀಡಿದ್ದಾರೆ.
ಇಲ್ಲಿ ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಪಕ್ಷದಿಂದ ಉಚ್ಚಾಟನೆ ಮಾಡಿದರೆ, ಚಿಕ್ಕಬಳ್ಳಾಪುರದಲ್ಲಿ ಕೆ. ಸುಧಾಕರ್ ಗೆ ಟಕ್ಕರ್ ಕೊಡಲು ಸಂಸದ ಬಿ.ಎನ್. ಬಚ್ಚೇಗೌಡ ಸಿದ್ಧಗೊಂಡಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿಗೆ ಈ ಎರಡು ಕ್ಷೇತ್ರಗಳು ಭಾರೀ ತಲೆನೋವಾಗಿ ಪರಿಣಮಿಸಿದೆ. ಒಂದು ಟಿಕೆಟ್ ಎರಡು ಕ್ಷೇತ್ರದ ಭವಿಷ್ಯ ಎನ್ನುವಂತಾಗಿದೆ.
ಇನ್ನು ಬದ್ಧ ವೈರಿಗಳಾಗಿದ್ದ ಬಿ.ಎನ್. ಬಚ್ಚೇಗೌಡ ಮತ್ತು ಎಚ್.ಡಿ. ದೇವೇಗೌಡ ಫ್ಯಾಮಿಲಿ ಇದೀಗ ಚುನಾವಣ ಕಣದಲ್ಲಿ ಮಿತ್ರರಾಗಿದ್ದಾರೆ. ಬಚ್ಚೇಗೌಡಗೆ ಅವಶ್ಯಕತೆ ಇದ್ದರೆ ಬೆಂಬಲ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿಕೆ ನೀಡಿದ್ದರಿಂದ ರಾಜಕಾರಣದಲ್ಲಿ ಯಾರು ಶಾಶ್ವತ ಶತ್ರುಗಳಲ್ಲ. ಯಾರು ಶಾಶ್ವತ ಮಿತ್ರರಲ್ಲ ಎನ್ನುವಂತಾಗಿದೆ.
ಹೊಸಕೋಟೆ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳು ರಾಜಕೀಯ ಚದುರಂದಾಟಕ್ಕೆ ಸಾಕ್ಷಿಯಾಗಿದ್ದು, ಇಲ್ಲಿ ಯಾರ ಕೈ ಮೇಲಾಗುತ್ತೇ ಎನ್ನುವುದನ್ನು ಕಾದು ನೋಡಬೇಕಿದೆ.