ಡಿವಿಜಿ ಸುದ್ದಿ, ಹಾಸನ: ರಾಜ್ಯದಲ್ಲಿ ಯಡಿಯೂರಪ್ಪ ಒಬ್ಬರೇ ಮುಖ್ಯಮಂತ್ರಿ ಇರೋದು. ಯಾವ ಸೂಪರ್ ಸಿಎಂ ಕೂಡ ಇಲ್ಲ. ವಿಜಯೇಂದ್ರ, ಯಡಿಯೂರಪ್ಪ ಅವರ ಮಗನೇ ಹೊರತು ಸರ್ಕಾರದ ಯಾವ ವ್ಯವಹಾರದಲ್ಲಿಯೂ ಅಧಿಪತಿಯಲ್ಲ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್‍ಗೆ ರಾಜ್ಯ ನಾಯಕರು ದೂರು ಬಗ್ಗೆ ಪ್ರತಿಕ್ರಿಸಿ ಆಡಳಿತ ಪಕ್ಷ ಎಂದಾಗ ಇಂತಹ ಆರೋಪಗಳು ಇರುತ್ತದೆ. ಆದರೆ ಬಿಜೆಪಿಯಲ್ಲಿ ಯಾರೂ ಹೊರ ಹೋಗುವ ಪರಿಸ್ಥಿತಿ ಇಲ್ಲಎಂದರು.
ಪರ-ವಿರೋಧ ಇದ್ದಾಗ ನಮ್ಮ ಭಾವನೆಗಳನ್ನು ಮುಖ್ಯಮಂತ್ರಿಗಳು, ಗೃಹ ಸಚಿವರು, ಪಕ್ಷದ ವರಿಷ್ಠರ ಬಳಿ ಹೇಳಿಕೊಳ್ಳುತ್ತೇವೆ. ಅಭಿಪ್ರಾಯ ಬೇರೆ ಬೇರೆ ಇದ್ದಾಗ ಹೇಳಿಕೊಳ್ಳುವುದು ತಪ್ಪಿಲ್ಲ.ಇದು ಒಡಕನ್ನು ಸೃಷ್ಟಿ ಮಾಡುವುದಿಲ್ಲ ಎಂದರು.