ವಿಡಿಯೋ: ಸದ್ಯ ನಾನು ಇನ್ ಆ್ಯಕ್ಟಿವ್ ಜೆಡಿಎಸ್ ಪಾರ್ಟಿ ಲೀಡರ್ : ಮಧು ಬಂಗಾರಪ್ಪ ಅಸಮಾಧಾನ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ಡಿವಿಜಿ ಸುದ್ದಿ, ಬೆಂಗಳೂರುಮಾಜಿ ಶಾಸಕ ಮಧು ಬಂಗಾರಪ್ಪ ಅವರು ಜೆಡಿಎಸ್‌  ನಾಯಕರ ನಡೆ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಸದ್ಯ ನಾನು ಇನ್ ಆ್ಯಕ್ಟಿವ್ ಜೆಡಿಎಸ್ ಪಾರ್ಟಿ ಲೀಡರ್ ಎಂದು ಹೇಳಿದ್ದಾರೆ.

https://www.facebook.com/636057286582068/videos/1151751721830397/?t=593

ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ನಾಯಕರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ಗೊಂದಲ ಬಗೆಹರಿಸಲು ಮುಂದಾಗದಿದ್ದರೆ ಮುಂದೆ  ದೊಡ್ಡ ಅನಾಹುತ ಕಾದಿದೆ. ಸದ್ಯ ನಾನು ಇನ್ ಆ್ಯಕ್ಟಿವ್ ಜೆಡಿಎಸ್ ಪಾರ್ಟಿ ಲೀಡರ್. ಮುಂದೆ ಆ್ಯಕ್ಟೀವ್ ಆಗೋಕೆ ಪ್ರಯತ್ನಿಸ್ತೇನೆ ಎಂದರು.

ಲೋಕಸಭಾ ಚುನಾವಣೆ ಬಳಿಕ ‌ನಾನು ಮಾಧ್ಯಮಗಳಿಂದ ದೂರ ಉಳಿದೆ. ಇದು ಪಕ್ಷದ ಕಾರಣಕ್ಕಾಗಿ ಅಲ್ಲ,  ವೈಯಕ್ತಿಕ ಕಾರಣಕ್ಕಾಗಿ.  ನನಗೂ‌, ಕಾರ್ಯಕರ್ತರಿಗೂ ನೋವಾಗಿದೆ. ಪಕ್ಷದಲ್ಲಿ ಕಾರ್ಯಕರ್ತರಿಗೆ ಸ್ಪಂದನೆ ಇರದೇ ಇರುವುದು ಬೇಸರದ ಸಂಗತಿ. ಜೆಡಿಎಸ್ ಕಾರ್ಯಕರ್ತರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಎಚ್. ವಿಶ್ವನಾಥ್ ನನ್ನನ್ನು ಕಾರ್ಯಾಧ್ಯಕ್ಷ ಮಾಡಿದ್ದು

ಮೈತ್ರಿ ಸರ್ಕಾರದ ಸಂದರ್ಭದಲ್ಲಿಯೇ  ಪಕ್ಷ  ಕಾರ್ಯಕರ್ತರನ್ನು ಕಳೆದುಕೊಂಡಿತು. ನಮ್ಮ ನಾಯಕರು ಕಾರ್ಯಕರ್ತರಿಗೆ ಸರಿಯಾಗಿ ಸ್ಫಂದಿಸಿಲ್ಲ. ಎಚ್. ವಿಶ್ವನಾಥ್ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾಗ  ನನ್ನನ್ನು ಕಾರ್ಯಾಧ್ಯಕ್ಷನನ್ನಾಗಿ ಮಾಡಿದ್ದರು.  ವಿಶ್ವನಾಥ್ ಮತ್ತು ಕುಮಾರಸ್ವಾಮಿ ನಡುವೆ ಇದ್ದವರು ಅವರಿಬ್ಬರ ನಡುವಿನ ಸಂಬಂಧ ಹಾಳು ಮಾಡಿದರು. ಆಗ ನಾನು  ಸೇರಿ ಹಲವು ನಾಯಕರು ಓಪನ್ ಆಗಿ ಮಾತಾಡ್ಬೇಕಿತ್ತು. ಆದರೆ ನಾವು ಆ ಸಂದರ್ಭದಲ್ಲಿ ಮೌನವಾಗಿದ್ದೆವು.

madhu bangarappa 2

ರಮೇಶ್ ಗೌಡ ಎಂಎಲ್ಸಿ ಮಾಡಿದ್ದು ತಪ್ಪು

ಆಗ ಕುಮಾರಸ್ವಾಮಿ ಯುಎಸ್ ನಲ್ಲಿದ್ದರು. ಕುಮಾರಸ್ವಾಮಿ ಅವರು ವಿಶ್ವನಾಥ್ ಅವರ ಜೊತೆ ಮಾತನಾಡಿದ್ದಿದ್ದರೆ ವಿಶ್ವನಾಥ್ ಪಕ್ಷ ಬಿಡುತ್ತಿರಲಿಲ್ಲ. ವಿಶ್ವನಾಥ್ ಅವರು ಯಾಕೆ ಹೋದರು ಎಂದು ನಾನು ಹೆಚ್ಚು ಮಾತನಾಡುವುದಿಲ್ಲ. ಕ್ರಿಮಿನಲ್ ರೆಕಾರ್ಡ್ ಇರುವ ರಮೇಶ್ ಗೌಡಗೆ ಎಂಎಲ್ ಸಿ ಪಟ್ಟ ಕೊಡಲಾಯಿತು. ಇದನ್ನೇ ಪಕ್ಷದ  ಕಾರ್ಯಕರ್ತರಿಗೆ ಕೊಟ್ಟಿದ್ದಿದ್ದರೆ ಒಳ್ಳೆಯದಾಗುತ್ತಿತ್ತು. ರಮೇಶ್ ಗೌಡಗೆ ಎಂಎಲ್ ಸಿ ಮಾಡಬಾರದಿತ್ತು. ವಿಶ್ವನಾಥ್ ರವರಿಗೆ ಸಚಿವ ಸ್ಥಾನ ಕೊಟ್ಟಿದ್ದರೆ ಅವರು ಪಕ್ಷ ಬಿಟ್ಟು ಹೋಗುತ್ತಿರಲಿಲ್ಲ ಎಂದರು.

ಮತನಾಡೋಕೆ ಯೋಗ್ಯತೆ ಇಲ್ಲದವರಿಗೆ ಅಧಿಕಾರ

ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಅವರ ಅಕ್ಕ ಪಕ್ಕ ಎಂ.ಪಿ‌. ಪ್ರಕಾಶ್, ಹೊರಟ್ಟಿ ಅಂಥವರು ಇರುತ್ತಿದ್ದರು. ಆದರೆ, ಈಗ ಅವರ ಅಕ್ಕಪಕ್ಕದಲ್ಲಿ ಇರುವವರು ಎಂಥವರು ಎಂದು ಪ್ರಶ್ನಿಸಿದ ಮಧು, ಮಾತನಾಡೋಕೆ ಯೋಗ್ಯತೆ ಇಲ್ಲದವರಿಗೆ ಅಧಿಕಾರ ಕೊಟ್ಟರು ಎಂದು ಆರೋಪಿಸಿದರು.

ಲೋಕಸಭೆ ಚುನಾವಣೆಗೆ ನಿಲ್ಲಬಾರದು ಎಂದೇ ನಾನು ಯೋಚಿಸಿದ್ದೆ. ದೇವೇಗೌಡರ ಒತ್ತಾಯದ ಮೆರೆಗೆ ಒಪ್ಪಿಕೊಂಡೆ.  ಪಕ್ಷ ಬಿಟ್ಟು ಹೋಗುವವರು ಹೋಗಲಿ ಎಂದು ಅಂತ ಕುಮಾರಸ್ವಾಮಿ ಹೇಳಬಾರದಿತ್ತು. ಜೆಡಿಎಸ್ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜೀನಾಮೆ ಕೇಳಿದಾಗ ಕೊಡುತ್ತೇನೆ. ಇಲ್ಲಾ, ಅವರೇ ತೆಗೆದುಹಾಕಬಹುದ.  ಹೊರಟ್ಟಿ ಸಭಾಪತಿ ಸ್ಥಾನದಿಂದ ಬಹಳ ದುಃಖದಿಂದಲೇ ಇಳಿದರು ಎಂದರು.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *