ಡಿವಿಜಿ ಸುದ್ದಿ , ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ ಶಾಶ್ವತ ವಿರೋಧ ಪಕ್ಷದ ನಾಯಕ ಅಂತಾ ಸುಳ್ಳು ಹೇಳಿದ್ದಾರೆ. ಸಿದ್ಧರಾಮಯ್ಯ ಅಧಿಕಾರ ಇದ್ದ ಕಡೆ ಇರ್ತಾರೆ ಎಂದು ಸಚಿವ ಕೆ. ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ರು.
ಸಿದ್ದರಾಮಯ್ಯ ಅಧಿಕಾರಕ್ಕಾಗಿ ಬಿಜೆಪಿ ಬಿಟ್ಟು ಎಲ್ಲಾ ಪಕ್ಷಕ್ಕೆ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಲ್ಲಿಯೂ ಸಿದ್ದರಾಮಯ್ಯ ಇರುವುದಿಲ್ಲ. ಈಗಾಗಲೇ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಆಗಿ ಹೋಗಿದೆ. ಇದು ಯಡಿಯೂರಪ್ಪನವರಿಗೆ ಗೊತ್ತಿಲ್ಲ . ಅದಕ್ಕಾಗಿ ಪರ್ಮೆನೆಂಟ್ ವಿರೋಧ ಪಕ್ಷದ ನಾಯಕ ಅಂತಾ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಗುಂಪುಗಾರಿಕೆಯಿಂದಲೇ ಸಿದ್ಧರಾಮಯ್ಯ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಕಳೆದುಕೊಳ್ಳುತ್ತಾರೆ. ನಮ್ಮ ಪಕ್ಷಕ್ಕೆ ಪೂರ್ಣ ಬಹುಮತವಿದೆ. ಒಳ ಒಪ್ಪಂದ ಆಗಿದ್ರೆ ಒಳಗೊಳಗೆ ಮಾಡಬೇಕಿತ್ತು. ಬಹಿರಂಗ ವಾಗಿ ಅಲ್ಲ. ಒಳ ಒಪ್ಪಂದ ವ್ಯವಸ್ಥೆ ಸಿದ್ದರಾಮಯ್ಯ ದೇವೇಗೌಡ್ರಿಗೆ ಮಾತ್ರ ಗೊತ್ತಿರೋದು.
ಜಾತಿ, ಧರ್ಮ ಹೊಡೆಯುವುದು ಕಾಂಗ್ರೆಸ್ ಕೆಲಸ. ಟಿಪ್ಪು ದೇವಸ್ಥಾನ ಹೊಡೆದಿದ್ದಾನೆ, ಧರ್ಮ ಭ್ರಷ್ಟರನ್ನು ಏಕೆ ಜಯಂತಿ ಮಾಡಬೇಕು. ಮಹಾ ಪುರುಷರು ಸಾಕಷ್ಟು ಜನ ಇದಾರೆ ಅವರ ಜಯಂತಿ ಮಾಡಲಿ.. ಸಾವರ್ಕರ್ ಬಗ್ಗೆ ಗೊಂದಲ ತಂದು ಇಟ್ಟರು. ರಾಷ್ಟ ಭಕ್ತರ ಬಗ್ಗೆ ವಿರೋಧ ಮಾಡುವುದೇ ಕಾಂಗ್ರೆಸ್ ಪಕ್ಷದ ಕೆಲಸ. ದೇಶ ಭಕ್ತರಿಗೆ ಗೌರವಿಸುವುದು, ದ್ರೋಹಿಗಳನ್ನು ವಿರೋಧಿಸುವುದು ಬಿಜೆಪಿ ಕೆಲಸ ಎಂದರು.
ಕಾಂಗ್ರೆಸ್ ಟಿಪ್ಪು ಬಗ್ಗೆ ಹೊಗಳುತ್ತಾರೆ ಅದು ಸೋನಿಯಾಗಾಂಧಿಯನ್ನು ತೃಪ್ತಿ ಪಡಿಸಲು. ವೀರ ಸಾವರ್ಕರ್ ರನ್ನು ವಿರೋಧಿಸುತ್ತಾರೆ ಅದು ಕೂಡ ಸೋನಿಯಾ ಗಾಂಧಿಯನ್ನು ತೃಪ್ತಿಪಡಿಸಲು. ಇದೇ ರೀತಿ ಕಾಂಗ್ರೆಸ್ ನಡೆದುಕೊಂಡರೆ ಕಾಂಗ್ರೆಸ್ ನಿರ್ನಾಮವಾಗಿ ಹೋಗುತ್ತದೆ ಎಂದರು



