ಡಿವಿಜಿ ಸುದ್ದಿ, ದಾವಣಗೆರೆ: ಗೂಂಡಾಗಿರಿ ಮತ್ತೊಂದು ಹೆಸರೇ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್. ಅವರ ಹಿನ್ನೆಲೆ ಏನು ಅಂತಾ ರಾಜ್ಯದ ಜನರಿಗೆ ಗೊತ್ತು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಹೊನ್ನಾಳಿಯ ತಾಲೂಕಿನ ಹಿರೇಕಲ್ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆರ್ ಆರ್ ನಗರದಲ್ಲಿ ನಾವು ದೌರ್ಜನ್ಯ ಮಾಡ್ತಾ ಇದ್ದೀವಿ. ಅವರು ತಪಸ್ಸು ಮಾಡ್ತಾ ಇದ್ದಾರೆ ಪಾಪಾ…! ಗೂಂಡಾಗಿರಿಗೆ ಮತ್ತೊಂದು ಹೆಸರೇ ಡಿಕೆ ಬ್ರದರ್ಸ್ , ಅವರು ಏನು ಅಂತಾ ರಾಜ್ಯದ ಜನರಿಗೆ ಗೊತ್ತು. ತಮ್ಮ ಬೇಳೆ ಬೇಯಿಸಿಕೊಳ್ಳಲು ಏನು ಬೇಕಾದ್ರು ಹೇಳಿ ಬಿಡ್ತಾರೆ ಎಂದು ಕಿಡಿಕಾರಿದರು.
ಇನ್ನು ಪಕ್ಷಕ್ಕೆ ಕಿರಿಕಿರಿ ಮಾಡ್ತಾ ಇರೋ ಆ ವ್ಯಕ್ತಿ ಯಾರು ಅಂತ ಜನರಿಗೆ ಈಗಾಗಲೇ ಗೊತ್ತು. ಆತನ ಮೇಲೆ ಕ್ರಮ ಕೈಗೊಳ್ಳುವಂತೆ ರಾಜ್ಯಾಧ್ಯಕ್ಷರಿಗೆ ತಿಳಿಸಲಾಗಿದೆ, ಕ್ರಮ ಕೈಗೊಳ್ಳುತ್ತಾರೆ ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಗೆ ಎಚ್ಚರಿಕೆ ನೀಡಿದರು.



