ಡಿವಿಜಿ ಸುದ್ದಿ, ಬೆಂಗಳೂರು: ಮಾಜಿ ಶಾಸಕರಾದ ಎಚ್. ವಿಶ್ವನಾಥ್, ಸಿ.ಪಿ.ಯೋಗೇಶ್ವರ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿಶೆಟ್ಟಿ, ಶಿಕ್ಷಣ ಕ್ಷೇತ್ರದ ಪ್ರೊ. ತಳವಾರ ಸಾಬಣ್ಣ ಹಾಗೂ ಆಫ್ರಿಕನ್ ಬುಡಕಟ್ಟಿನ ಸಿದ್ಧಿ ಜನಾಂಗದ ಶಾಂತಾರಾಮ ಸಿದ್ಧಿ ಸೇರಿ ಐವರನ್ನು ವಿಧಾನಪರಿಷತ್ತಿಗೆ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ನಿಂತು ಸೋತಿದ್ದ ಸಿ.ಪಿ ಯೋಗೇಶ್ವರ ಹಾಗೂ ಸಮ್ಮಿಶ್ರ ಸರ್ಕಾರ ವಿರುದ್ಧ ಬಂಡಾಯವೆದ್ದು ಬಿಜೆಪಿಗೆ ಸೇರಿದ್ದ ಹಿರಿಯ ಮುಖಂಡ ಎಚ್. ವಿಶ್ವನಾಥ್ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ಧಾರೆ.
ಇನ್ನು ಶಾಂತಾರಾಮ ಸಿದ್ಧಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಯಲ್ಲಾಪುರ ಸಮೀಪದ ಹಿತ್ನಳ್ಳಿಯವರು. ಶಾಂತಾರಾಮ್ ವನವಾಸಿ ಕಲ್ಯಾಣ ಸಂಘಟನೆ ಮೂಲಕ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪ್ರೊ. ತಳವಾರ ಸಾಬಣ್ಣ ಅವರು ಕೋಳಿ ಸಮಾಜಕ್ಕೆ ಸೇರಿವರಾಗಿದ್ದು, ಪ್ರಾಧ್ಯಾಪಕರಾಗಿದ್ದಾರೆ.




