ದೆಹಲಿ: ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಆದರೆ, ಲಾಬಿ ಮಾಡಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಗೆ ಅಭಿವೃದ್ಧಿ ದೃಷ್ಠಿಯಿಂದ ಒಂದು ಸಚಿವ ಸ್ಥಾನ ನೀಡಬೇಕಿದೆ. ಈ ಬಗ್ಗೆ ನಾನು ಕೂಡ ಒಬ್ಬ ಆಕಾಂಕ್ಷಿಯಾಗಿದ್ದೇನೆ. ಆದರೆ, ಈ ಬಗ್ಗೆ ಲಾಬಿ ಮಾಡಲ್ಲ ಎಂದರು.
ಸಚಿವ ಸ್ಥಾನಕ್ಕೆ ಯಾರನ್ನು ತಗೆದುಕೊಳ್ಳಬೇಕು ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದ ಅವರು, ನನ್ನ ವೈಯಕ್ತಿಕ ಕೆಲಸ ಹಾಗೂ ಕ್ಷೇತ್ರದ ಕೆಲಸಕ್ಕಾಗಿ ದೆಹಲಿಗೆ ಬಂದಿದ್ದಾನೆ ಎಂದು ಹೇಳಿದರು.



