ಡಿವಿಜಿ ಸುದದ್ದಿ, ಉಡುಪಿ: ರಾಮನಗರ ಜಿಲ್ಲೆಯಲ್ಲಿ ಏಸುಸ್ವಾಮಿ ಪ್ರತಿಮೆಗೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸರಕಾರಿ ಜಮೀನು ನೀಡಿರುವ ಸುದ್ದಿ ಸಖತ್ ವೈರಲ್ ಆಗ್ತಿದೆ. ಈ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ಉಡುಪಿಯಲ್ಲಿ ಪ್ರತಿಕ್ರಿಯಿಸಿದ್ದು, ಸರ್ಕಾರಿ ಜಮೀನು ಮಂಜೂರಾತಿ ಬಗ್ಗೆ ಮೊದಲು ತನಿಖೆ ಆಗಬೇಕು ಎಂದರು.
2014 ರಿಂದ 18ರ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಸರ್ಕಾರಿ ಜಮೀನು ಮಂಜೂರು ಆದ ಬಗ್ಗೆ ತನಿಖೆಗೆ ತರಬೇಕು. ಬಗರ್ ಹುಕುಂ ಜಮೀನು ಬಗ್ಗೆ ಕೂಡಾ ತನಿಖೆಯಾಗಬೇಕು. ನಾನೇ ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ್ದೆ ಎಂದರು.
2017-18ರ ಅವರಧಿಯಲ್ಲಿ ಬೇಕಾಬಿಟ್ಟಿ ಸರ್ಕಾರಿ ಜಮೀನು ಹಂಚಿಕೆಯಾಗಿದೆ. ಜಮೀನು ಮಂಜೂರಾಗಿರುವಾಗ ಸಾಕಷ್ಟು ಪಕ್ಷಪಾತವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಎಸಿಗೆ ವಹಿಸಲಾಗಿದೆ ಎಂದು ಹೇಳಿದರು.
ವಿಧಾನಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ. ಎಸಿಯಿಂದ ಬಂದ ವರದಿ ನೋಡಿ ಕ್ರಮ ಕೈಗೊಳ್ಳುತ್ತೇವೆ. ಶಿವಮೊಗ್ಗ, ಬೆಂಗಳೂರು, ತುಮಕೂರಲ್ಲಿಯೂ ಜಮೀನು ಹಂಚಿಕೆಯಾಗಿದೆ. ಅಲ್ಲೂ ಸ್ವಜನಪಕ್ಷಪಾತವಾದ ಬಗ್ಗೆ ಆರೋಪಗಳಿವೆ ಈ ಬಗ್ಗೆ ಕೂಡಾ ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು.



