ಡಿವಿಜಿ ಸುದ್ದಿ, ಕೆ.ಆರ್ ಪೇಟೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇನ್ನು ಮೂರುವರೆ ವರ್ಷ ನೀವೇ ಮುಖ್ಯಮಂತ್ರಿಯಾಗಿ ಅಂತಾ ಹೇಳಿದ್ದೇನೆ. ಆದರೆ, ದ್ವೇಷ ರಾಜಕಾರಣದಿಂದ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾದ್ರೆ ಸಹಿಸಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
ಕೆ.ಆರ್ ಪೇಟೆಯ ಹರಹಳ್ಳಿಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರ ಅವರು, ನಾನು 60 ವರ್ಷ ರಾಜಕೀಯದಲ್ಲಿ ಇದ್ದೇನೆ. ಯಾರ ಬಗ್ಗೆಯೂ ಅವಾಚ್ಯವಾಗಿ ಮಾತನಾಡಲ್ಲ. ಆದರೆ, ದ್ವೇಷ ರಾಜಕಾರಣಕ್ಕೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾದರೆ ಸಹಿಸಿಕೊಂಡು ಸುಮ್ಮನಿರಲ್ಲ.
ನನ್ನ ಈ ಇಳಿ ವಯಸ್ಸಿನಲ್ಲಿಯೂ ಆರೋಗ್ಯ ಲೆಕ್ಕಿಸದೇ ಹೋರಾಟ ಮಾಡುತ್ತೇನೆ. ಈ 60 ವರ್ಷದ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು ಬೀಳು ಕಂಡಿದ್ದೇನೆ. ಆದರೆ, ಕಾರ್ಯಕರ್ತರಿಗೆ ಅನ್ಯಾಯವಾದ್ರೆ ಸಹಿಸಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರದಲ್ಲಿ ಜೆಡಿಎಸ್ ಕಾರ್ಯಕರ್ತರೇ ಟಾರ್ಗೆಟ್

ರಾಮನಗರದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ಸರ್ಕಾರದಲ್ಲಿ ಜೆಡಿಎಸ್ ಕಾರ್ಯಕರ್ತರೇ ಟಾರ್ಗೆಟ್ ಆಗಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿ ಸಚಿವ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಕಾನೂನು ರೀತಿಯಲ್ಲಿ ನಡೆಯುವ ಕ್ರಷರ್ ಗಳನ್ನು ಮುಚ್ಚಿದ್ದಾರೆ. ನಾವು ಕಾನೂನು ಬಾಹಿರವಾಗಿ ಅನುಮತಿ ಕ್ರಷರ್ ಗಳಿಗೆ ಅನುಮತಿ ನೀಡಿ ಎಂದಿಲ್ಲ. ಕಾನೂನು ರೀತಿಯಲ್ಲಿ ನಡೆಯುವ ಕ್ರಷರ್ ಗಳನ್ನು ಮುಚ್ಚಿಸಿದ್ದಾರೆ. ಜಿಲ್ಲಾಧಿಕಾರಿ ಐಎಎಸ್ ಆಗಿಲ್ಲ, ಮಂತ್ರಿ ಮನೆ ಕಾಯುವ ಕೆಲಸಗಾರನಾಗಿದ್ಧಾನೆ ಎಂದು ಆಕ್ರೋಶ ವ್ಯ್ಕತಪಡಿಸಿದರು.



