ಡಿವಿಜಿ ಸುದ್ದಿ, ಹಾಸನ: ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಪತನದ ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೆಂಡಕಾರುತ್ತಿರುವ ಕುಮಾರಸ್ವಾಮಿ ನಂತರ ಇವತ್ತು ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಕಿಡಿಕಾರಿದರು. ನಮಗೆ ಯಾರೊಂದಿಗೂ ಸಂಬಂಧ ಮಾಡಿಕೊಳ್ಳುವ ಅಗತ್ಯವಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮುಖ ಮತ್ತೆ ನೋಡಲ್ಲ ಅಂತಾ ಕೆಂಡಕಾರಿದರು.
ಆರು ದಶಕಗಳಿಗೂ ಹೆಚ್ಚು ಕಾಲ ರಾಜಕೀಯದಲ್ಲಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಕನಿಷ್ಠ ಪ್ರಜ್ಞೆ ಇದೆ.ನಾನು ಯಡಿಯೂರಪ್ಪ, ಸಿದ್ದರಾಮಯ್ಯ ಮನೆಗೆ ಸಂಬಂಧ ಮಾಡೋಕೆ ಹೋಗ್ಬೇಕಿತ್ತೇನ್ರಿ? ರಾಜಕೀಯ ಮಾಡೋದು ನನಗೆ ಗೊತ್ತಿದೆ’ ಎಂದರು.
ಸಿದ್ದರಾಮಯ್ಯ, ಯಡಿಯೂರಪ್ಪ ಅವರ ಮನೆಗೆ ನಾನೇನು ನೆಂಟಸ್ತಿಕೆ ಮಾಡೋಕೆ ಹೋಗ್ಬೇಕಿತ್ತಾ? ನನ್ನ ಹೇಳಿಕೆಯನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಬಿಂಬಿಸಿವೆ ಎಂದು ಸಿಟ್ಟಿನಿಂದಲೇ ಉತ್ತರಿಸಿದರು. ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.