ಡಿವಿಜಿ ಸುದ್ದಿ, ಹಾವೇರಿ: ರಾಜ್ಯ ಸಚಿವ ಸಂಪುಟದಲ್ಲಿ ಇನ್ನು ಆರು ಜನರನ್ನು ಸಚಿವರನ್ನಾಗಿ ಮಾಡಲು ಅವಕಾಶವಿದ್ದು, ಈ ಬಾರಿ ನನಗೆ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಹಾವೇರಿ ಶಾಸಕ ನೆಹರು ಓಲೇಕಾರ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದ ಎಲ್ಲಾ ಸಮುದಾಯಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಒತ್ತು ವಿಶ್ವಾಸವಿದ್ದು, ನನಗೂ ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಸಿಎಂ ಭೇಟಿ ಮಾಡಿದಾಗ ಮುಂದಿನ ಬಾರಿ ನೋಡೋಣ ಎಂದು ಹೇಳಿದ್ದಾರೆ. ಹೀಗಾಗಿ ಈ ಬಾರಿ ನನಗೆ ಸಚಿವ ಸ್ಥಾನ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಇನ್ನೂ ಮೂರುವರೆ ವರ್ಷ ಯಡಿಯೂರಪ್ಪ ಅವರೇ ಅಧಿಕಾರ ಮಾಡುತ್ತಾರೆ. ಸಿ.ಎಂ.ಉದಾಸಿ ಅವರಿಗೆ 85 ವಯಸ್ಸು ಆಗಿದೆ. ಅದರೂ ಯುವಕರಂತೆ ಓಡಾಡುತ್ತಾರೆ. ಯಡಿಯೂರಪ್ಪನವರು ಸಹ ಚುರುಕಾಗಿ ಕೆಲಸ ಮಾಡಿ ದಾಖಲೆ ನಿರ್ಮಿಸುತ್ತಾರೆ. ಈ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ, ಬಿಎಸ್ ವೈ ಅವರೇ ನಮ್ಮ ನಾಯಕರು ಎಂದು ಓಲೆಕಾರ ತಿಳಿಸಿದ್ದಾರೆ.



