ಡಿವಿಜಿ ಸುದ್ದಿ, ಮೈಸೂರು: ಗಂಡ-ಹೆಂಡತಿಯೇ ಯಾವಾಗಲೂ ಒಟ್ಟಿಗೆ ಇರೋದಕ್ಕೆ ಸಾಧ್ಯವಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವ ನಾವು, ಯಾವಾಗಲೂ ಒಟ್ಟಿಗೆ ಇರಬೇಕೆಂದ್ರೆ ಹೇಗೆ ಸಾಧ್ಯ… ನಾವೆಲ್ಲ ಈಗಲೂ ಒಟ್ಟಿಗೆ ಇದ್ದೇವೆ. ಎಲ್ಲೋ ಒಬ್ಬರು ಮಿಸ್ ಆಗ್ತಾರೆ ಎನ್ನುವ ಮೂಲಕ ಮಾಜಿ ಸಚಿವ ಎಚ್. ವಿಶ್ವನಾಥ್ ವಿರೋಧಿಗಳಿಗೆ ಟಾಂಗ್ ಕೊಟ್ಟರು.
ಸಚಿವ ಸಂಪುಟ ವಿಸ್ತರಣೆ ನಂತರ ಎಚ್. ವಿಶ್ವನಾಥ್ ಒಂಟಿಯಾಗಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರು ಯಾವಗಲೂ, ಒಬ್ಬರನ್ನೊಬ್ಬರು ತಬ್ಬಿಕೊಂಡು ಒಟ್ಟಿಗೆ ಇರಲು ಸಾಧ್ಯವಿಲ್ಲ. ಇನ್ನುಗಂಡ-ಹೆಂಡತಿಯರೇ ಸದಾ ಜೊತೆ ಇರಲು ಸಾಧ್ಯವಿಲ್ಲ. ಇಂತಹದರಲ್ಲಿ ನಾವೆಲ್ಲರು (ಶಾಸಕರು) ಸದಾ ಒಟ್ಟಿಗೆ ಇರಲು ಹೇಗೆ ಮರು ಪ್ರಶ್ನೆ ಹಾಕಿದರು.
ಈಗ ನಾವೆಲ್ಲ ಒಟ್ಟಾಗಿದ್ದೇವೆ. ರಾಜ್ಯದಲ್ಲಿ ಸಂಪೂರ್ಣ ಸಚಿವ ಸಂಪುಟ ಒಳಗೊಂಡ ಸರ್ಕಾರ ರಚನೆಯಾಗಿದೆ. ರಾಜ್ಯ ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಕಾರ್ಯ ಮಾಡಲಿ ಎಂದರು.



